ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಮೃದು ಕೌಶಲ್ಯಗಳ ಕಾರ್ಯಾಗಾರವನ್ನು ನಡೆಸಲಾಯಿತು.
ಶಾಲೆಯಲ್ಲಿ ಕೇವಲ ಪಠ್ಯ ಬೋಧನೆಗೆ ಸೀಮಿತವಾಗಿರದೆ ಮಕ್ಕಳ ಜೀವನಕ್ಕೆ ಸಹಾಯಕವಾಗುವ ಕಾರ್ಯಾಗಾರಗಳನ್ನು ಆಯೋಜಿಸಿ ಮಕ್ಕಳ ಜೀವನ ಕೌಶಲ್ಯ ವೃದ್ಧಿಸಲು ಸಹಕರಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರ ನಡೆಸಿದ ಡಾ. ಅಕ್ಷತ ಅವರು ಮೃದು ಕೌಶಲ್ಯಗಳು, ಯೋಜನೆಯನ್ನು ಹೇಗೆ ಮಾಡಬೇಕು. ತಂಡದ ಕೆಲಸದ ಮಹತ್ವ, ಅದರ ಉಪಯೋಗ, ಹೊಂದಾಣಿಕೆಯ ಅಗತ್ಯ, ಮಹತ್ವ ಇತ್ಯಾದಿಗಳನ್ನು ವಿವಿಧ ಚಟುವಟಿಕೆಯ ಮುಖಾಂತರ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು.ಶಾಲಾ ಮಾನವ ಸಂಪನ್ಮೂಲ ಸಂಘ ಈ ಕಾರ್ಯಾಗಾರ ಆಯೋಜಿಸಿತ್ತು.