ಜಿಲ್ಲಾ ವಾರ್ತೆ

ಸುಳ್ಯ ತಾಲೂಕಿನ ಪಯಸ್ವಿನಿ ನದಿ ಯಲ್ಲಿ ಪ್ರವಾಹದಲ್ಲಿ ತೇಲಿ ಬಂದ ಫ್ರಿಡ್ಜ್

ಸುಳ್ಯ; ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಕುಂಭ ದ್ರೋಣ ಮಳೆಯಿಂದಾಗಿ ಕೊಡಗಿನ ಗಡಿಭಾಗದ ಜನರ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿದೆ. ಅದರಲ್ಲೂ ಸುಳ್ಯ ತಾಲೂಕಿನ ಪ್ರಮುಖ ನದಿಯಾದ ಪಯಸ್ವಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದ್ದು ಪೆರಾಜೆಯ ಸುತ್ತಮುತ್ತಲಿನ ಕೆಲವು ಗ್ರಾಮಗಳು ಮುಳುಗುವ ಭೀತಿಯಲ್ಲಿವೆ. ಇನ್ನು ನದಿಯಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು ನದಿಯಲ್ಲಿ ಇಂದು ಮರದ ದಿಮ್ಮಿಗಳ ಜೊತೆ ಫ್ರಿಡ್ಜ್ ಒಂದು ತೇಲಿ ಬಂದಿದೆ. ಇದು ಎಲ್ಲಿಂದ ಬಂದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಯಾವುದೋ ಮನೆಗೆ ನೀರು ನುಗ್ಗಿ ಮನೆಯಲ್ಲಿರುವ ವಸ್ತುಗಳು ನೀರು ಪಾಲಾಗಿ ಈ ರೀತಿ ಆಗಿರಬೇಕು ಅಥವಾ ಮನೆ ಬಳಿ ಗುಜರಿಗೆ ಇಟ್ಟ ಫ್ರಿಡ್ಜ್ ನೀರಿನಲ್ಲಿ ಕೊಚ್ಚಿಕೊಂಡು ಬಂದಿರಬೇಕು ಎಂದು ಅಂದಾಜಿಸಲಾಗಿದೆ.

ನಿಮ್ಮದೊಂದು ಉತ್ತರ