ಗ್ರಾಮಾಂತರ ಸುದ್ದಿ

ಜನಜಾಗೃತಿ ವೇದಿಕೆ ನೆರಿಯ ಗ್ರಾಮ ಸಮಿತಿ ಸಭೆ

ಬೆಳ್ತಂಗಡಿ: *ಬೆಳ್ತಂಗಡಿ ತಾಲೂಕಿನ ನೆರಿಯ ವಲಯದ ನೆರಿಯ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಗ್ರಾಮ ಸಮಿತಿಯನ್ನು*
*ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಡಿ.ಏ.* ರೆಹಮಾನ್ ಅವರು *ಉದ್ಘಾಟಿಸಿದರು.*

*ಜನಜಾಗೃತಿ ವೇದಿಕೆಯ ಆಡಳಿತಾತ್ಮಕ ಯೋಜನಾಧಿಕಾರಿಗಳಾದ ಮೋಹನ್ ರವರು ಮಾತನಾಡಿ ವೇದಿಕೆಯ ಬೆಳವಣಿಗೆ ಸ್ವರೂಪ ನಡೆದುಬಂದ ದಾರಿ ಹಾಗೂ ಗ್ರಾಮ ಸಮಿತಿಯ ಉದ್ದೇಶ ನವಜೀವನ ಸಮಿತಿ ಪುನಶ್ಚೇತನ, ಬಲವರ್ಧನೆ, ಸ್ವ ಉದ್ಯೋಗ, ಹಾಗೂ ಸಮಾಜ ಬಾಹಿರ ಚಟುವಟಿಕೆಗಳನ್ನು ನಿರ್ಬಂಧಿಸುವ ಬಗ್ಗೆ ಸಮರ್ಪಕವಾದ ಮಾಹಿತಿ ನೀಡಿದರು. ನೂತನವಾಗಿ ನೆರಿಯ ವಲಯದಲ್ಲಿ 2 ಗ್ರಾಮ ಸಮಿತಿಗಳನ್ನು ರಚನೆ ಮಾಡಲಾಯಿತು. ತೋಟತ್ತಾಡಿ ಗ್ರಾಮ ಸಮಿತಿಯ ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ ಇರ್ವತ್ರಾಯ, ಅಧ್ಯಕ್ಷರಾಗಿ ಆಂಟನಿ ಉಪಾಧ್ಯಕ್ಷರಾಗಿ ನಾರಾಯಣಗೌಡ ಅಗರಿ, ಕಾರ್ಯದರ್ಶಿಯಾಗಿ ಓಬಯ್ಯ ಗೌಡ ಅವರನ್ನು ಆಯ್ಕೆ ಮಾಡಲಾಯಿತು. ನೆರಿಯ ಗ್ರಾಮ ಸಮಿತಿ ಗೌರವಾಧ್ಯಕ್ಷರಾಗಿ ಮಿತ್ರ ಸೇನ ಇಂದ್ರ, ಅಧ್ಯಕ್ಷರಾಗಿ ರಾಜಪ್ಪ ಗೌಡ ಅಂಬ್ಲೆ, ಉಪಾಧ್ಯಕ್ಷರಾಗಿ ಆನಂದ್ ಪೂಜಾರಿ, ಕಾರ್ಯದರ್ಶಿಯಾಗಿ ಶರೀಫ್ ಬಿ. ಎಂ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ದಾಖಲಾತಿ ವಿತರಿಸಲಾಯಿತು. ತಾಲೂಕು ಯೋಜನಾಧಿಕಾರಿಗಳಾದ ಜಯಕರ ಶೆಟ್ಟಿ, ಶಿಬಿರಾಧಿಕಾರಿಗಳಾದ ನಾಗರಾಜ್, ಒಕ್ಕೂಟದ ಪ್ರತಿನಿಧಿಗಳು, ಊರಿನ ಗಣ್ಯರು, ಸೇವಾ ಪ್ರತಿನಿಧಿಗಳು ಹಾಜರಿದ್ದರು. ಶಿಬಿರಾದಿಕಾರಿ ದೇವಿಪ್ರಸಾದ್ ಕಾರ್ಯಕ್ರಮ ನಿರ್ವಹಣೆ ಮಾಡಿದರು, ವಲಯ ಮೇಲ್ವಿಚಾರಕರಾದ ರಾಜೇಶ್ ಸ್ವಾಗತಿಸಿ, ಮೊಹಮ್ಮದ್ ಶರೀಫ್ ವಂದಿಸಿದರು.*

ನಿಮ್ಮದೊಂದು ಉತ್ತರ