ಬೆಳ್ತಂಗಡಿ: ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಬಾರು ಗ್ರಾಮದ ಬಂತ್ತಡ್ಕ ನಿವಾಸಿ ದಿ.ಹರೀಶ್ ಭಂಡಾರಿಯವರ ಪತ್ನಿ ಶ್ರೀಮತಿಶ್ಯಾಮಲ ಭಂಡಾರಿಯವರ ಮನೆಯು ಜು.14ರಂದು ಬಾರಿ ಗಾಳಿ ಮಳೆಗೆ ಮನೆಯ ಮಾಡಿನ ಪಕ್ಕಾಸು ಹಂಚುಗಳು ಬಿದ್ದು ನಷ್ಟ ಉಂಟಾಗಿದೆ.ಹೀಗೆ ಮಳೆ ಮುಂದುವರಿದರೆ
ಮನೆಯ ಮಾಡು ಕುಸಿದು ಬೀಳುವ ಸಾಧ್ಯತೆ ಇದೆ. ಈ ಮನೆಯಲ್ಲಿ ಒಬ್ಬ ಮಹಿಳೆ ಮತ್ತು ಇಬ್ಬರು ಮಕ್ಕಳು ವಾಸುತ್ತಿದ್ದು, ಇವರಿಗೆ ಸದ್ಯ ಬದಲಿ ವ್ಯವಸ್ಥೆ ಮಾಡದ್ದಿದಾರೆ ಅಪಾಯವಾಗುವ ಸಾಧ್ಯತೆ ಇದೆ.
ಮನೆಗೆ ಮರ ಬಿದ್ದು ಹಾನಿ:
ಶಿರ್ಲಾಲು ಗ್ರಾಮ ಪಂಚಾಯತ್ ಒಳಪಡುವ ಪುಚ್ಚೆದೊಟ್ಟು ಸಿದ್ದುನವರ ಮನೆಗೆ ರಾತ್ರಿಯ ಗಾಳಿ ಮಳೆಗೆ ಮನೆಗೊಂದು ಮರ ಬಿದ್ದು ಬಾರಿ ನಷ್ಟ ಸಂಭವಿಸಿರುವುದಾಗಿ ವರದಿಯಾಗಿದೆ.