ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಇತ್ತೀಚೆಗೆ ವಾರ್ತಾವಾಹಿನಿಗಳ ಮುಂದೆ ಜೈನರ ಫಿಲಾಸಫಿಯಲ್ಲಿ ೨೪ ಜನ್ಮಗಳು ಇವೆಯಂತೆ, ಅದೆಲ್ಲಾ ಸುಳ್ಳು ಎಂದು ಹೇಳಿಕೊಂಡಿದ್ದಾರೆ. ಹಂಸಲೇಖ ಅವರ ಈ ಹೇಳಿಕೆಯನ್ನು ಜೈನ ಧರ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತದೆ.
ಹಂಸಲೇಖ ಅವರೇ, ನಿಮ್ಮ , ಸಾಮಾಜಿಕ ಹೋರಾಟಗಳು ಏನೇ ಇರಲಿ ಅದರ ಬಗ್ಗೆ ನಮ್ಮ ಆಕ್ಷೇಪ ಇಲ್ಲ. ಆದರೆ ಹಂಸಲೇಖ ಅವರು ಸಾರ್ವಜನಿಕವಾಗಿ ಜೈನ ಧರ್ಮವನ್ನು ಹಿಯ್ಯಾಳಿಸುವ ಮಾತುಗಳನ್ನು ಆಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಮತ್ತೊಂದು ಧರ್ಮದ ನಂಬಿಕೆಗಳನ್ನು ಸಾರ್ವಜನಿಕವಾಗಿ ಅಲ್ಲದೇ ಒಬ್ಬ ಸಾಮಾಜಿಕ ಚಿಂತಕನೆಂದು ಬಿಂಬಿಸಿಕೊಂಡಿರುವ ಹಂಸಲೇಖ ಅವರು ಸಾಮಾಜಿಕ ಸಭ್ಯತೆಯ ಎಲ್ಲೆಯನ್ನು ಮೀರಿದ್ದಾರೆ.
ಜಗತ್ತಿನ ಅತ್ಯಂತ ಅಹಿಂಸಾಮಯವಾದ, ಹಾಗೂ ದಾನ ಧರ್ಮಗಳಲ್ಲಿ ಅಗ್ರ ಸ್ಥಾನದಲ್ಲಿರುವ ಜೈನ ಧರ್ಮದ ಬಗೆಗಿನ ನಂಬಿಕೆಗಳ ವಿಚಾರಗಳನ್ನು ಅಪಹಾಸ್ಯ ಮಾಡಿರುವ ಹಂಸಲೇಖ ಅವರು ಜೈನ ಧರ್ಮೀಯರ ಕ್ಷಮೆ ಕೋರಲೇಬೇಕು. ಆಯಾಯ ಧರ್ಮಗಳ ನಂಬಿಕೆಗಳನ್ನು ಅಪಹಾಸ್ಯ ಮಾಡುವ ಅಥವಾ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಯಾಕೆಂದರೆ ಇದು ಭಾರತ ದೇಶ. ಬೇಕಾದ ಧರ್ಮವನ್ನು ಅವರವರು ಅನುಸರಿಸಿಕೊಂಡು ಹೋಗುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಹಂಸಲೇಖ ಅವರೇ ಸಾಮಾಜಿಕ ಜವಾಬ್ದಾರಿ ನಿಮಗೆ ಇರುವುದಾದರೆ ಈ ಕೂಡಲೇ ಕ್ಷಮೆ ಕೇಳಲೇಬೇಕು.
* ನಿರಂಜನ್ ಜೈನ್ ಕುದ್ಯಾಡಿ