ಸುಳ್ಯ: ಕೆಲದಿನಗಳ ಹಿಂದೆ ಪದೇ ಪದೇ ಲಘ ಭೂಕಂಪನದಿಂದ ಸುದ್ದಿಯಾಗುತ್ತಿದ್ದ ಸುಳ್ಯ ತಾಲೂಕಿನಲ್ಲಿ ನಿನ್ನೆ ಮತ್ತೆ ಭೂಮಿ ಕಂಪಿಸಿದೆ. ಸುಳ್ಯ ತಾಲೂಕಿನ ಮಡಪ್ಪಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿನ್ನೆ ಸಂಜೆ ಲಘು ಭೂಕಂಪನವಾದ ಅನುಭವವಾಗಿದೆ.
ಮಡಪ್ಪಾಡಿ ಗ್ರಾಮದ ಕಡ್ಯ, ಹಾಡಿಕಲ್ಲು ಮಡಪ್ಪಾಡಿ ಪೇಟೆ ಹಾಗೂ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ನಡುಗಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.