ಜಿಲ್ಲಾ ವಾರ್ತೆ

ಕರ್ನಾಟಕ ರಾಜ್ಯ ಗೃರಕ್ಷಕ ಸಿಬ್ಬಂದಿಗಳ ಬೇಡಿಕೆಯನ್ನು ಈಡೇರಿಸುವ ಭರವಸೆ : ಸಂಸದ ನಳಿನ್ ಕುಮಾರ್ ಕಟೀಲ್

ಆಲ್ ಇಂಡಿಯಾ ವೆಲ್ ಫೇರ್ ಅಸೋಸಿಯೇಷನ್, ಸರ್ಕಾರಿ ಗೌರವ ಧನಧಾರಿತ ಕ್ಷೇಮಾಭಿವೃದ್ಧಿ ಮಹಾ ಸಂಘ (ರಿ ) ಸಂಘದ ಪದಾಧಿಕಾರಿಗಳು ಮತ್ತು ಜಿಲ್ಲಾ ಪದಾಧಿಕಾರಿಗಳು ದ.ಕ ಜಿಲ್ಲೆ ಇವರ ಸಹಯೋಗದೊಂದಿಗೆ ವಿ.ಕ್ರಷ್ಣಪ್ಪ ಪೂಜಾರಿ ಕಲ್ಲಡ್ಕ.ಸದಸ್ಯರು -ಜಿಲ್ಲಾ ಅಭಿವೃದ್ಧಿ  ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಕ್ಷಿಣ ಕನ್ನಡ ಇವರ ನೇತ್ರತ್ವದಲ್ಲಿ , ಈ ದಿನ ಸಂಸದರಾದ ಕರ್ನಾಟಕ ರಾಜ್ಯ ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರನ್ನು ಭೇಟಿ ಮಾಡಿ ಗೃಹ ರಕ್ಷಕರ ಸಿಬ್ಬಂದಿಗಳ ಸಮಸ್ಯೆಗಳನ್ನು ಸಂಸದರಿಗೆ ತಿಳಿಸಿ ರಾಜ್ಯ ಸರ್ಕಾರದಿಂದ ನ್ಯಾಯ ಯುಕ್ತವಾದ ಬೇಡಿಕೆಗಳನ್ನು ಈಡೇರಿಸುವಂತೆ ವಿನಂತಿಸಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸರ್ಕಾರಿ ಗೌರವಧನಾಧಾರಿತ ಸಂಘದ ಗೌರವಾಧ್ಯಕ್ಷರಾದ ರೇವಣ್ಣಪ್ಪ ,ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ,ರಾಜ್ಯಾಧ್ಯಕ್ಷರಾದ ರಮಾಕಾಂತ್ . ಕಾರ್ಯದರ್ಶಿ ಶ್ರೀಧರ ,ಸಹ ಕಾರ್ಯದರ್ಶಿಗಳಾದ ಶ್ರೀನಿವಾಸ ಪಾಪಾಚಾರಿ, ಖಜಾಂಚಿ ಶ್ರೀ ವಿನಾಯಕ . ಸಂಘಟನಾ ಕಾರ್ಯದರ್ಶಿಗಳಾದ ರಮೇಶ್ ಗೌಡ ರಾಜ್ಯ ಪದಾಧಿಕಾರಿಗಳಾದ ಮೌನ ತೋಟದ್ , ಮತ್ತು ಮಲ್ಲಪ್ಪ ಕಂಚಿ ,ಮಲ್ಲಪ್ಪ ಹೂಗಾರ್
ಮತ್ತು ಜಿಲ್ಲೆಯ ಹಿರಿಯ ಗೃಹರಕ್ಷಕ ಸಿಬ್ಬಂದಿಗಳು ಸರ್ವ ಸದಸ್ಯರು ಉಪಸ್ಥಿತಿಯಲ್ಲಿದ್ದರು.

ನಿಮ್ಮದೊಂದು ಉತ್ತರ