ಕ್ರೈಂ ವಾರ್ತೆ

ತೆಕ್ಕಾರು ವಿದ್ಯುತ್ ಶಾಕ್ ಹೊಡೆದು ಕರ್ತವ್ಯ ನಿರತ ಲೈನ್ ಮ್ಯಾನ್ ಸಾವು

ತೆಕ್ಕಾರು: ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮೆಸ್ಕಾಂ ಪವರ್ ಮ್ಯಾನ್ ವಿದ್ಯುತ್ ಶಾಕ್ ಗೊಳಗಾಗಿ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕರ್ತವ್ಯ ನಿರತ ಕಲ್ಲೇರಿ ಸೆಕ್ಷನ್ ಆಫೀಸಿನ ಮೆಸ್ಕಾಂ ಪವರ್ ಮ್ಯಾನ್ ವಿಕಾಸ್ ಎಂಬವರುಮೃತಪಟ್ಟ
ವರು.ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಪಿಂಡಿಕಲ್ಲು ಎಂಬಲ್ಲಿ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭಿಸಿದೆ. ಕಳೆದ ಎರಡು ದಿನದಿಂದ ಭಾರಿ ಗಾಳಿ ಮಳೆ ಸುರಿದ ಕಾರಣ ವಿದ್ಯುತ್ ಅಡಚಣೆ ಉಂಟಾಗಿತ್ತು.
ಘಟನಾ ಸ್ಥಳಕ್ಕೆ ಉಪ್ಪಿನಂಗ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ನಿಮ್ಮದೊಂದು ಉತ್ತರ