ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ನ ಸುದೆಮುಗೇರು ವಾರ್ಡ್ ಸೀಲ್ಡೌನ್ ಆದ ಬೆನ್ನಿಗೆ ಇದೀಗ ನ.ಪಂ.ದ 2ನೇ ವಾಡ್೯ನ ಕಲ್ಲಗುಡ್ಡೆಯ ಎರಡು ಮನೆಗಳನ್ನು ಸೀಲ್ ಮಾಡಲಾಗಿದೆ.
ಕಲ್ಲಗುಡ್ಡೆಯ ಎರಡು ಮನೆಗಳಲ್ಲಿ ಆರು ಪಾಸಿಟೀವ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ನಗರ ಪಂಚಾಯಿತ್ ವತಿಯಿಂದ ಮೇ 9ರಂದು ಸೀಲ್ ಡೌನ್ ಮಾಡಲಾಯಿತು. ಅಲ್ಲದೆ ಈ ಪ್ರದೇಶ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕೋವಿಡ್ ತಪಾಸಣೆ ನಡೆಯುತ್ತಿದೆ.