ಗ್ರಾ.ಪಂ ಚುನಾವಣೆ: ಶೇ 78.43 ಮತದಾನ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ೪೬ ಗ್ರಾಮ ಪಂಚಾಯತುಗಳಲ್ಲಿ ಚುನಾಯಿತ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗೆ ಇಂದು ( ಡಿ.೨೭ರಂದು) ನಡೆದ ಚುನಾವಣೆ ಯಲ್ಲಿ ಶೇ78.43 ಮತದಾನ ದಾಖಲಾಗಿದೆ.
79,930 ಪುರುಷರು
ಮತ್ತು 79,875ಮಹಿಳೆಯರು ಸೇರಿದಂತೆ ಒಟ್ಟು 1,59,814 ಮಂದಿ ಮತದಾರರು ಈ ಬಾರಿ ಮತ ಚಲಾಯಿಸುವ ಮೂಲಕ ಈ ಫಲಿತಾಂಶ ದಾಖಲಾಗಿದೆ.
ಈ ಬಾರಿ 1,01,000 ಪುರುಷ ಮತದಾರರು ಮತ್ತು 1,02,164 ಮಹಿಳಾ ಮತದಾರರು ಸೇರಿ ದಂತೆ ಒಟ್ಟು 2,01,764 ಮತದಾರರು ಇದ್ದರು. ಇವರಲ್ಲಿ 79,960 ಪುರುಷರು ಮತ್ತು 79,875 ಮಹಿಳೆಯರು ಸೇರಿದಂತೆ 1,59,814 ಮಂದಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ತಾಲೂಕಿನಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿರುವುದಾಗಿ ವರದಿಯಾಗಿದೆ.