●* ಕೋರೋಣಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ
● ನೆರಿಯ ವ್ಯಾಪ್ತಿಯಲ್ಲಿ ಮಂಗಳ ವಾರ ಮೇ 25 ರಂದು ಬೆಳಿಗ್ಗೆ 10.00ರಿಂದ ಶನಿವಾರ ಮೇ 29 ರಂದು ಬೆಳಿಗ್ಗೆ 6.00 ರವರೆಗೆ 4 ದಿನಗಳವರೆಗೆ ನೆರಿಯ* *ಗ್ರಾಮದಲ್ಲಿ, ಸ್ವಯಂ ಪ್ರೇರಿತವಾಗಿ ಸಂಪೂರ್ಣ ಲಾಕ್
● ನೆರಿಯ ಗ್ರಾಮ * *ಗ್ರಾಮ* *ಪಂಚಾಯತಿ*ಅಧ್ಯಕ್ಷೆ ಶ್ರೀಮತಿ ವಸಂತಿ ರವರ ಅಧ್ಯಕ್ಷತೆ ಯಲ್ಲಿ ತುರ್ತು ಸಮಾಲೋಚನೆ ಸಭೆಯಲ್ಲಿ ನಿಧಾ೯ರ
ನೆರಿಯ: ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋರೋಣಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೊರೋಣಾ ಸಾಂಕ್ರಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ , ಮೇ 22 ರಂದು *ನೆರಿಯ ಗ್ರಾಮ * *ಗ್ರಾಮ* *ಪಂಚಾಯತಿ*ಅಧ್ಯಕ್ಷೆ ಶ್ರೀಮತಿ ವಸಂತಿ ರವರ ಅಧ್ಯಕ್ಷತೆ ಯಲ್ಲಿ ತುರ್ತು ಸಮಾಲೋಚನೆ ಸಭೆ ನಡೆಸಲಾಗಿದ್ದು ನೆರಿಯ ವ್ಯಾಪ್ತಿಯಲ್ಲಿ *ಮಂಗಳ ವಾರ ಮೇ 25 ರಂದು ಬೆಳಿಗ್ಗೆ 10.00ರಿಂದ ಶನಿವಾರ ಮೇ 29 ರಂದು ಬೆಳಿಗ್ಗೆ 6.00 ರವರೆಗೆ 4 ದಿನಗಳವರೆಗೆ ನೆರಿಯ* *ಗ್ರಾಮದಲ್ಲಿ, ಸ್ವಯಂ ಪ್ರೇರಿತವಾಗಿ ಸಂಪೂರ್ಣ ಲಾಕ್ ಡೌನ್ ಮಾಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ * . ನೆರಿಯ ಗ್ರಾಮಸ್ಥರು, ಭಾನುವಾರ, ಸೋಮವಾರ, ಮಂಗಳವಾರ 3 ದಿನಗಳಂದು ಬೆಳಿಗ್ಗೆ 6.00ರಿಂದ 9.30 ರವರೆಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸುವುದು . ಮತ್ತು 4 ದಿನದ ಸ್ವಯಂ ಪ್ರೇರಿತ ಬಂದ್ ಗೆ ಸಹಕರಿಸುವುದು.
* *ಮೇ 25ರಿಂದ ಮುಂದಿನ 4 ದಿನಗಳು ನೆರಿಯ ಗ್ರಾಮ ವ್ಯಾಪ್ತಿಯಲ್ಲಿ ಬ್ಯಾಕಿಂಗ್ ವ್ಯವಹಾರ ಸೇರಿದಂತೆ ಎಲ್ಲಾ ಅಂಗಡಿ ಮುಂಗಟ್ಟು ಗಳು* ಸಂಪೂರ್ಣವಾಗಿ ಬಂದ್ ಆಗಿರುತ್ತದೆ… *ತುರ್ತು ಆರೋಗ್ಯ ಸೇವೆ, ಹಾಲು ಉತ್ಪಾದಕರ ಸಹಕಾರಿ ಸಂಘ, ಮಾಧ್ಯಮ ಹಾಗೂ ದಿನ ಪತ್ರಿಕೆ ವಿತರಣೆ ಗಳನ್ನು ಹೊರತು ಪಡಿಸಿ ಎಲ್ಲಾ ವ್ಯವಹಾರವನ್ನು ಕಡ್ಡಾಯವಾಗಿ ನಿರ್ಬಂದಿಸಲಾಗಿದೆ* . ದೈನಂದಿನ ಹಾಲು ಖರೀದಿಯ ಬಗ್ಗೆ ಹಾಲು ಉತ್ಪಾದಕರ ಸಂಘ ದಿಂದ ಖರಿದಿಸುವುದು. *ಇತರ ಯಾವುದೇ ಅಂಗಡಿ ತೆರೆದರೆ ಸೀಜ್ ಮಾಡಲಾಗುವುದು ಹಾಗೂ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿ ಸಲಾಗುವುದು.* ಅನಗತ್ಯವಾಗಿ ವಾಹನ ಚಲಾಯಿಸಿದವರ ವಾಹನವನ್ನು ಸೀಜ್ ಮಾಡಲಾಗುವುದು ಹಾಗೂ ಲಾಕ್ ಡೌನ್ ಮುಗಿಯುವ ವರೆಗೆ ಸಿಗುವುದಿಲ್ಲ… **ಇಂದು ನಡೆದ ತುರ್ತು ಕೋವಿಡ್ ಸಮಾಲೋಚನಾ ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು,ಗ್ರಾಮ ಪಂಚಾಯತ್ ಸದಸ್ಯರುಗಳು, ವಿವಿಧ ಸಂಘಟನೆಗಳ ಪ್ರಮುಖರು, ಚರ್ಚಿನ ಧರ್ಮ ಗುರುಗಳು, ಮಸೀದಿಯ ಧರ್ಮ ಗುರುಗಳು, ಗ್ರಾಮದ ಹಿರಿಯರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಆರಕ್ಷಕ ಠಾಣಾ ಸಿಬ್ಬಂದಿಗಳು, ಕೋವಿಡ್ ಕಾರ್ಯಪಡೆ ಯವರು ಉಪಸ್ಥಿತರಿದ್ದು* ಸೂಕ್ತ ಸಲಹೆ ಸೂಚನೆ ಗಳನ್ನು ನೀಡಿ ಸಹಕರಿಸಿದರು.