ಗ್ರಾಮಾಂತರ ಸುದ್ದಿ

ಕೊವಿಡ್ ನಿಯಮ ಉಲ್ಲಂಘಿಸಿದ ಮದ್ದಡ್ಕದ ಸೆಲೂನ್ ಮಾಲಕನ ಮೇಲೆ ಕೇಸ್

ಮದ್ದಡ್ಕ: ಕುವೆಟ್ಟು ಗ್ರಾಮದ ಮದ್ದಡ್ಕ ಜಂಕ್ಷನ್ ಕೊವಿಡ್ ನಿಯಮವನ್ನು ಉಲ್ಲಂಘಿಸಿ
ರಿಲ್ಯಾಕ್ಸ್ ಮೆನ್ಸ್ ಬ್ಯೂಟಿಪಾರ್ಲರ್ ಸೆಲೂನ್ ತೆರೆದ ಮಾಲಕ ವರಕಬೆ ನಿವಾಸಿ ಅಬ್ದುಲ್ ಹಾದ್ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮೇ 7 ರಂದು ಬೆಳಿಗ್ಗೆ 8.15ಕ್ಕೆ ಪೊಲೀಸರು ಅಂಗಡಿಯ ಒಳಗೆ ಹೋಗಿ ನೋಡಲಾಗಿ 5ರಿಂದ 7 ಮಂದಿ ಮಾಸ್ಕ್ ಹಾಕದೇ ಯಾವುದೇ ಸಾಮಾಜಿಕ ಅಂತರವನ್ನು ಕಾಯದೇ ಗುಂಪಾಗಿ ಸೇರಿದ್ದು, ಆರೋಪಿ ಗ್ರಾಹಕರನ್ನು ಸೇರಿಸಿಕೊಂಡು ಕ್ಷೌರ ನಡೆಸುತ್ತಿರುವನ್ನು ಪತ್ತೆ ಮಾಡಿದ್ದಾರೆ. ರಾಜ್ಯ ಸರಕಾರದ ನಿರ್ದೇಶನ
ದಂತೆ ಮಾರಕ ಸಾಂಕ್ರಾಮಿಕ ರೋಗ ನೊವೆಲ್‌ ಕೊರೋನಾ ವೈರಸ್‌ ಹರಡದಂತೆ ಮುಂಜಾಗ
ರೂಕತಾ ಕ್ರಮವಾಗಿ ಪಾಲಿಸಬೇಕಾದ ಸುರಕ್ಷಾತ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶವಿದ್ದರೂ ತನ್ನ ಮಾಲಕತ್ವದ ಸೆಲೂನ್ ಅಂಗಡಿಯಲ್ಲಿ ಗ್ರಾಹಕರನ್ನು ಸೇರಿಕೊಂಡು ಕ್ಷೌರ ಮಾಡುತ್ತಾ ನಿಲ೯ಕ್ಷದಿಂದ ಪ್ರಾಣಕ್ಕೆ ಅಪಾಯಕಾರಿಯಾದ ಸೋಂಕನ್ನು ಹರಡುವ ಕೃತ್ಯವನ್ನು ಎಸಗಿ , ಸರಕಾರಿ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ