ಜಿಲ್ಲಾ ವಾರ್ತೆರಾಜ್ಯ ವಾರ್ತೆ

ವೆನ್ ಲಾಕ್ ಆಸ್ಪತ್ರೆಯ ಕೋವಿಡ್- 19 ಮುಖ್ಯ ನೋಡಲ್ ಆಫೀಸರ್ ಆಗಿ ಡಾ. ಎಂ ಅಣ್ಣಯ್ಯ ಕುಲಾಲ್ ನೇಮಕ

*ವೆನ್ಲೋಕ್ ಆಸ್ಪತ್ರೆಯ ಕೋವಿಡ್ 19 ರ ಮುಖ್ಯ ನೋಡಲ್ ಆಫೀಸರ್ ಆಗಿ ನಗರದ ಸಮಾಜ ಮುಖಿಹಿರಿಯ ವೈದ್ಯ ಡಾ ಎಂ ಅಣ್ಣಯ್ಯ ಕುಲಾಲ್ ಅವರನ್ನ ದಕ ಜಿಲ್ಲಾಡಳಿತ ನೇಮಕ ಮಾಡಿದೆ*


ಡಾ ಕುಲಾಲ್ ಅವರು ಕೊರೊನ ಆರಂಭ ವಾದ ದಿನಗಳಿಂದ ಮಂಗಳೂರು ಭಾರತೀಯ ವೈದ್ಯಕೀಯ ಸಂಘ, ಕುಟುಂಬ ವೈದ್ಯರ ಸಂಘಟನೆ, ಶ್ರೀನಿವಾಸ್ ವಿಶ್ವವಿದ್ಯಾಲಯ ಗಳ ಜೊತೆ ಸೇರಿ ಶುಶ್ರುಷೆ, ಆರೈಕೆ ಮತ್ತು ಜನಜಾಗೃತಿ ಯಲ್ಲಿ ತೊಡಗಿಸಿ ಕೊಂಡಿದ್ದರು. ಕಳೆದ ಬಾರಿ ಮಂಗಳೂರಿನ ಪ್ರತಿಷ್ಠಿತ ಭಾರತೀಯ ವೈದ್ಯಕೀಯ ಸಂಘಟನೆಯ ಹಿರಿಯ ತಜ್ಞ ವೈದ್ಯರ ಸಹಾಯದಲ್ಲಿ ರಾಜ್ಯದಲ್ಲೇ ಪ್ರಥಮ ಉಚಿತ ಟೆಲಿ consultation ಆರಂಭಿಸಿ ಮಾದರಿ ಆಗಿದ್ದರು.
ಕೆಎಂಸಿ ಮತ್ತು ವೆನ್ಲೋಕ್ ಆಸ್ಪತ್ರೆ ಯಲ್ಲಿಯೇ mbbs ಓದಿ, ಅರೋಗ್ಯ ಹಾಗೂಆಸ್ಪತ್ರೆ ನಿರ್ವಣೆಯಲ್ಲಿ ಉನ್ನತ ವ್ಯಾಸಂಗ, ರಾಷ್ಟ್ರೀಯ ವಿಪತ್ತು ನಿರ್ವಣೆಯಲ್ಲಿ ರೆಡ್ ಕ್ರಾಸ್ ನಿಂದ ತರೆಬೇತಿ ಪಡೆದ ಹಿರಿಯ ತರಬೇತುದಾರರು, ಸದ್ದಿಲ್ಲದೇ ಸಂಘಟನಾತ್ಮಕ ವಾಗಿ ಸಮಾಜ ಮುಖೀ ಸೇವೆ ಮಾಡುವ ಇವರು ವೆನ್ಲೋಕ್ ಅರೋಗ್ಯ ರಕ್ಷಾ ಸಮಿತಿ, KPME ನೋಂದಾವಣ ಸದಸ್ಯ, ಕೋವಿಡ್ ಟಾಸ್ಕ್ ಫೋರ್ಸ್, ಕೋವಿಡ್ ಡೆತ್ ಆಡಿಟ್, ventilator, ಆಕ್ಸಿಜನ್, remedicivir ಸಮಿತಿ ಯಲ್ಲಿ ಜಿಲ್ಲಾಡಳಿತದ ಜೊತೆ ದುಡಿದವರು.
Ima, ಕುಟುಂಬ ವೈದ್ಯ ಸಂಫಟನೆಯ ಮಾಜಿ ಅಧ್ಯಕ್ಷರು ಆಗಿರುವ ಇವರು, ಶ್ರೀನಿವಾಸ್ ವಿ ವಿ ಯ ಮುಖ್ಯ ವೈದ್ಯಧಿಕಾರಿ ಹಾಗೂ
ಪ್ರಾಧ್ಯಾಪಕ ರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕುಟುಂಬ ವೈದ್ಯರಾಗಿ ಮಂಗಳಾದೇವಿ ವೀರನಗರ, ಪಡೀಲ್ ಕಣ್ಣೂರು, ಅರ್ಕುಳ, ವಳಚ್ಚಿಲ್, ಬೋಳಾರಾ,ಪಾಂಡೇಶ್ವರ, ಸುರತ್ಕಲ್, ಮುಕ್ಕ, ಸಸಿಹಿತ್ಲು, ಬೈಕಂಪಡಿ,ಮುಲಿಹಿತ್ಲು ಪ್ರದೇಶಗಳಲ್ಲಿ ವೈದ್ಯಕೀಯ ಸೇವೆ ಮಾಡಿದವರು

ನಿಮ್ಮದೊಂದು ಉತ್ತರ