ತಾಲೂಕು ಸುದ್ದಿ

10ಕ್ಕೂ ಹೆಚ್ಚು ಮಂದಿಗೆ ಪಾಸಿಟೀವ್ : ಸುದೇಮುಗೇರು ಪ್ರದೇಶ ಸೀಲ್ ಡೌನ್

ಬೆಳ್ತಂಗಡಿ ಪಟ್ಟಣ ಪಂಚಾಯತ್ 8ನೇ ವಾರ್ಡ್ ಸುಧೆಮುಗೇರು ಎಂಬಲ್ಲಿ 10 ಕ್ಕೂ ಹೆಚ್ಚು ಮಂದಿಗೆ ಕೊರೊನ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು .ಈ ಪ್ರದೇಶವನ್ನು ಸಿಲ್ ಡೌನ್ ಮಾಡಲಾಗಿದೆ ಎಂದು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್ ತಿಳಿಸಿದ್ದಾರೆ.


ಬೆಂಗಳೂರುನಿಂದ ಬಂದ ಈ ವಾರ್ಡ್‌ನ ಇಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನಲೆಯಲ್ಲಿ ಈ ಪ್ರದೇಶ ವ್ಯಾಪ್ತಿಯ ಜನರಿಗೆ ಕೊರೊನಾ ಆರ್‌ಟಿಪಿಸಿಆರ್ ಟೆಸ್ಟ್‌ನ್ನು ಸುದೆಮುಗೇರು ಅಂಗನವಾಡಿಯಲ್ಲಿ ನಡೆಸಲಾಗತ್ತು. ಇದುವರೆಗೆ ಸುಮಾರು 90 ಮಂದಿ ಆಗಮಿಸಿ ಟೆಸ್ಟ್ ಮಾಡಿಸಿಕೊಂಡಿದ್ದು, ಇವರಲ್ಲಿ 10 ಕ್ಕೂ ಹೆಚ್ಚು ಮಂದಿಗೆ ಈಗ ಕೊರೊನಾ ಪಾಸಿಟೀವ್ ಧೃಡ ಪಟ್ಟಿದೆ ಎಂದು ವರದಿಯಾಗಿದೆ.

ಪಾಸಿಟೀವ್ ಬಂದವರನ್ನು ಲಾಯಿಲ ಕೊರೊನಾ ಕೇರ್ ಸೆಂಟರ್ ಗೆ ದಾಖಲಿಸಿ ಚಿಕಿತ್ಸೆ     ನೀಡಲಾಗುತ್ತಿದೆ.

 

50 ಮನೆಗಳಿಗೆ ಸ್ಯಾನಿಟೈಸರ್ ಸಿಂಪಡಣೆ: ಸುದೇಮುಗೇರು ಮತ್ತು ಹುಡ್ಕೋ ರಸ್ತೆಯ 50 ಮನೆಗಳಿಗೆ ಇಂದು ಬೆಳಿಗ್ಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ನ.ಪಂ ಸದಸ್ಯ ಜಗದೀಶ್ ಡಿ., ಕರುಣಾಕರ್, ಲಕ್ಷೀನಾರಾಯಣ, ಅಶೋಕ್, ಪೌರಕಾಮಿ೯ಕ ಸುರೇಶ್ ಉಪಸ್ಥಿತಿ ಇದ್ದರು.

ನಿಮ್ಮದೊಂದು ಉತ್ತರ