ಬೆಳ್ತಂಗಡಿ: ನಡ ಗ್ರಾಮದ ಗಡಾಯಿಕ
ಲ್ಲುನಲ್ಲಿ ಇಂದು ಬೆಳಿಗ್ಗೆ ಸ್ಫೋಟದೊಂದಿಗೆ ಮತ್ತೆ
ಕಲ್ಲಿನ ಬಂಡೆ ಕೆಳಗೆ ಜಾರಿ ಬಿದ್ದಿದೆ ಎಂದು ನಡ ಗ್ರಾ.ಪಂ ಮಾಜಿ ಸದಸ್ಯ ಶ್ಯಾಮಸುಂದರ್ ನಡ ತಿಳಿಸಿದ್ದಾರೆ.
ಕಳೆದ ಮೇ.2ರಂದು ಗಡಾಯಿಕಲ್ಲು ಮೇಲೆ ಭಾರೀ ಸ್ಫೋಟದೊಂದಿಗೆ ಬಂಡೆ ಜಾರಿ ಬಿದ್ದಿದ್ದರಿಂದ, ಪೂತಿ೯ ಧೂಳು ತುಂಬಿತ್ತು.
ಸ್ಫೋಟ ಸುಮಾರು 1 ಕಿ.ಮೀಗೂ ಹೆಚ್ಚು ದೂರ ಕೇಳಿಸಿತ್ತು. ಇವತ್ತು ಬೆಳಿಗ್ಗೆ ಕೂಡಾ ದೊಡ್ಡ ಶಬ್ದದೊಂದಿಗೆ ಅದೇ ಜಾಗದಲ್ಲಿ ಬಂಡೆ ಜಾರಿ ಕೆಳಗೆ ಬಿದ್ದಿರುವುದು ಸ್ಥಳೀಯರಿಗೆ ಕಾಣಿಸಿದೆ.