ತಾಲೂಕು ಸುದ್ದಿ

ಗಡಾಯಿಕಲ್ಲು ನಲ್ಲಿ ಭಾರೀ ಸ್ಫೋಟದ ಶಬ್ದ: ಕುಸಿದು ಬಿದ್ದ ಕಲ್ಲಿನ ಭಾಗ

ಬೆಳ್ತಂಗಡಿ: ನಡ ಗ್ರಾಮದ ಇತಿಹಾಸ ಪ್ರಸಿದ್ಧ ಗಡಾಯಿಕಲ್ಲುನಲ್ಲಿ ಸ್ಫೋಟದ ಭಾರೀ ಶಬ್ದ ಇಂದು ಬೆಳಿಗ್ಗೆ ಸ್ಥಳೀಯರಿಗೆ ಕೇಳಿಸಿದೆ.


ಈ ಸ್ಫೋಟದ ಬಳಿಕ ಗಡಾಯಿಕಲ್ಲು ನ ಒಂದು ಬದಿಯಲ್ಲಿ ಕಲ್ಲಿನ ಭಾಗ ಕೆಳಗೆ ಜಾರಿ ಬಿದ್ದಿದೆ, ಗಡಾಯಿಕಲ್ಲು ಮೇಲೆ ಪೂತಿ೯ ಧೂಳು ಅವರಿಸಿದೆ ಎಂದು ಗ್ರಾ. ಪಂ ಮಾಜಿ ಸದಸ್ಯ ಹಾಗೂ ಹಿಂದೂ ಸಂಘಟನೆಯ ಹಿರಿಯ ಮುಖಂಡರ ಶ್ಯಾಮಸುಂದರ್ ನಡ ತಿಳಿಸಿದ್ದಾರೆ.
ಸ್ಫೋಟ ಸುಮಾರು 1 ಕಿ.ಮೀಗೂ ಹೆಚ್ಚು ದೂರ ಕೇಳಿಸಿದ್ದು, ಪರಿಸರದ ನಾಗರಿನ್ನು ಬೆಚ್ಚಿ ಬೀಳಿಸಿತ್ತು.ಕಳೆದ ವಷ೯ವೂ ಇದೇ ಅವಧಿಯಲ್ಲಿ ಗಡಾಯಿಕಲ್ಲು ನ ಒಂದು ಭಾಗದ ಕಲ್ಲು ಸ್ಫೋಟ ಗೊಂಡು ಕೆಳಗೆ ಜಾರಿ ಬಿದ್ದಿತ್ತು.

 

ನಿಮ್ಮದೊಂದು ಉತ್ತರ