ತಾಲೂಕು ಸುದ್ದಿ

ಶಿಶಿಲದ ಕಿರಣ್ ಗೌಡ ಬೆಂಗಳೂರಿನಲ್ಲಿ ಅರೆಸ್ಟ್

ಬೆಳ್ತಂಗಡಿ : ಬೆಂಗಳೂರಿನಲ್ಲಿ ರೌಡಿ ಗ್ಯಾಂಗ್ ವೊಂದರ ಮೇಲೆ ಸಂಚು ರೂಪಿಸಿದ 11 ಮಂದಿಯನ್ನು ಸಿಸಿಬಿ ಪೊಲೀಸ್ ರು ಬಂಧಿಸಿದ್ದು, ಬಂಧಿತರಲ್ಲಿ  ಶಿಶಿಲ ಗ್ರಾಮದ ದೇವಸ ನಿವಾಸಿಯಾಗಿರುವ ರೌಡಿ ಶೀಟರ್ ಕಿರಣ್ ಗೌಡ ಎಂಬವರು ಸೇರಿದ್ದಾರೆ.


ಬೆಂಗಳೂರಿನಲ್ಲಿ ಇನ್ನೊಂದು ಗ್ಯಾಂಗಿನ ಮೇಲೆ ದಾಳಿ ನಡೆಸುವ ಸಂಚನ್ನು ಗುಂಪೊಂದು ರೂಪಿಸಿತ್ತು. ಇದರ ಮಾಹಿತಿ ಪಡೆದ ಬೆಂಗಳೂರು ಸಿಸಿಬಿ ಪೊಲೀಸರು ಸಂಚುಕೋರರನ್ನು ಬೆನ್ನಟ್ಟಿ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದರು. ಒಟ್ಟು 11 ಮಂದಿಯನ್ನು ಬಂಧಿಸಲಾಗಿದ್ದು ಅದರಲ್ಲಿ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ದೇವಸ ನಿವಾಸಿ ಕಿರಣ್ ಗೌಡ ಎಂಬವರು ಸೇರಿದ್ದಾನರೆಂದು ತಿಳಿದು ಬಂದಿದೆ.
ಕಿರಣ್ ಗೌಡರಮೇಲೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 9 ಕೇಸುಗಳು ದಾಖಲಾಗಿದೆ.

ನಿಮ್ಮದೊಂದು ಉತ್ತರ