ಮೇಲಂತಬೆಟ್ಟು: ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನ ಮೇಲಂತಬೆಟ್ಟುವಿನಲ್ಲಿ ಜ.14 ಮಕರ ಸಂಕ್ರಮಣದ ದಿನದಂದು ಸಂಕ್ರಮಣ ಪೂಜೆ, ಗುರುಪೂಜೆ, ಶ್ರೀ ದೇವಿಗೆ ವಿಶೇಷ ರಂಗಪೂಜೆ ಜರುಗಿತು.
ಸಂಜೆ 6.30 ರಿಂದ ಸಾರ್ವಜನಿಕ ದುರ್ಗಾ ನಮಸ್ಕಾರ ಪೂಜೆ , 7.30 ಕ್ಕೆ ಗುರುಪೂಜೆ , 7.30 ರಿಂದ 8. 30 ರ ವರೆಗೆ ಶ್ರೀಭಗವತಿ ಅಮ್ಮ ಭಜನಾ ಸಮಿತಿಯಿಂದ ವಿಶೇಷ ಭಜನಾ ಕಾರ್ಯಕ್ರಮ ಜರುಗಿತು.
8.30ಕೆ ಶ್ರೀ ಭಗವತಿ ಅಮ್ಮನವರಿಗೆ ವಿಶೇಷ ಅಲಂಕಾರ ಸೇವೆ ಹಾಗೂ ರಂಗಪೂಜೆ ವಿಜೃಂಭಣೆಯಿಂದ ಜರುಗಿತು.
ಈ ಸಂದರ್ಭದಲ್ಲಿ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಆಯ್ಕೆ ಯಾದ
ಗ್ರಾ.ಪಂ ಸದಸ್ಯರನ್ನು ಕ್ಷೇತ್ರದ ವತಿಯಿಂದ
ಗೌರವಿಸಲಾಯಿತು. ಬಳಿಕ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಕಾಯ೯ಕ್ರಮ ನಡೆಯಿತು.
ದೇವಸ್ಥಾನದ ಧಮ೯ದಶಿ೯ ಯೋಗೀಶ್ ಪೂಜಾರಿ, ಪ್ರಧಾನ ಅಚ೯ಕ ಯಶವಂತ ಶಾಂತಿ, ಆಡಳಿತ ಮತ್ತು ಭಜನಾ ಸಮಿತಿ ಪದಾಧಿಕಾರಿಗಳ ಸಹಕಾರ ದಲ್ಲಿ ಕಾಯ೯ಕ್ರಮ ಯಶಸ್ವಿಯಾಗಿ ನಡೆಯಿತು. ಕಾಯ೯ಕ್ರಮದಲ್ಲಿ ಊರ, ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.