ಮಚ್ಚಿನ: ಶ್ರೀ ಮಹಾತೋಭರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ, ಮಚ್ಚಿನ ಇದರ ನೂತನ ರಥಾಲಯ ಸಮರ್ಪಣೆ ಹಾಗೂ ಶ್ರೀ ಅನಂತೇಶ್ವರ ಸ್ವಾಮಿ ಕಂಬಳ ಸಮಿತಿ ಬಳ್ಳಮಂಜ ಇದರ 25ನೇ ವರ್ಷದ ಶೇಷ – ನಾಗ ಜೋಡುಕೆರೆ ಕಂಬಳದ ಆಮಂತ್ರಣ ಪತ್ರಿಕೆಯ ಬಿಡುಗಡೆ ನ.28ರಂದು ಜರುಗಿತು.
ಶಾಸಕ ಹರೀಶ್ ಪೂಂಜ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಶುಭ ಹಾರೈಕೆ ಮಾಡಿದರು. ಈ ಸಂದರ್ಭದಲ್ಲಿ ಅನುವಂಶೀಯ ಆಡಳಿತ ಮೋಕ್ತೇಸರ ಡಾ. ಹಷ೯ಸಂಪಿಗೆತ್ತಾಯ ಹಾಗೂ ಪದಾಧಿಕಾರಿಗಳು, ಊರಿನ ಗಣ್ಯರು ಉಪಸ್ಥಿತರಿದ್ದರು.