ತಾಲೂಕು ಸುದ್ದಿ

ಕರಾವಳಿ ಜಿಲ್ಲೆಗಳಿಗೆ ಜ.1 ರಿಂದ ಪಡಿತರ ಕುಚಲಕ್ಕಿ ವಿತರಣೆ – ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಳ್ತಂಗಡಿ: ಸರ್ಕಾರವು ಪಡಿತರ
ಯೋಜನೆಡಿಯಲ್ಲಿ ಕರಾವಳಿ ಭಾಗದ ಜನರಿಗೆ ಕುಚಲಕ್ಕಿವಿತರಿಸುವ ಯೋಜನೆ ತಂದಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದ. ಕನ್ನಡ ಹಾಗೂ ಉ. ಕನ್ನಡದಲ್ಲಿ ಜನವರಿ 1 ರಿಂದ ಪಡಿತರ ಮೂಲಕ ಕುಚಲಕ್ಕಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಕಟಿಸಿದರು.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಭತ್ತದ ಬೆಂಬಲ ಬೆಲೆಯಲ್ಲಿ ಖರೀದಿಸಿ, ಭತ್ತಕ್ಕೆ ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರ ಕೊಡಲು ನಿರ್ಧರಿಸಿದೆ.
ಕರಾವಳಿ ಜಿಲ್ಲೆಗಳ ಜನರು ನಾವು ಊಟ ಮಾಡುವ ಕುಚಲಕ್ಕಿಯನ್ನು ಪಡಿತರ ಮೂಲಕ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ ಬೇರೆ ಬೇರೆ ಕಾರಣಗಳಿಂದ ಜಾರಿ ಸಾಧ್ಯವಾಗಿರಲಿಲ್ಲ. ಬಹುಜನರ, ಬಹು ದಿನಗಳ ಬೇಡಿಕೆಯನ್ನು ಸಿಎಂ ಗಮನಿಸಿದರೆ ಕುಚಲಕ್ಕಿಯನ್ನು ನಾವು ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಈ ಹಿನ್ನೆಲೆ ಆಹಾರ ಇಲಾಖೆ ಹಾಗೂ ಕೃಷಿ ಇಲಾಖೆ ಜೊತೆಗೆ ಸಭೆ ನಡೆಸಿದ್ದು, ಉಡುಪಿ, ದ.ಕನ್ನಡ ಮತ್ತು ಉ.ಕನ್ನಡದಲ್ಲಿ ಡಿಸೆಂಬರ್ 1 ರಿಂದ ಕುಚಲಕ್ಕಿಗೆ ಪೂರಕವಾಗಿ 2,540 ರೂ. ಬೆಲೆ ನೀಡಿ ಭತ್ತ ಖರೀದಿ ಕೇಂದ್ರ ತೆರೆಯುತ್ತೇವೆ. ಜನವರಿ 1 ರಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಐದು ಕೆಜಿ ಕುಚಲಕ್ಕಿಯನ್ನು ಪಡಿತರ ವಿತರಿಸಲಾಗಿದೆ.
ವರ್ಷ ಪೂರ್ತಿ ನಮ್ಮಲ್ಲಿ ಕುಚಲಕ್ಕಿಯ ಭತ್ತ ಸಿಗುವುದು ಕಷ್ಟಸಾಧ್ಯ. ಹೀಗಾಗಿ ರಾಜ್ಯದ ಬೇರೆ ಜಿಲ್ಲೆಗಳಿಂದ ಭತ್ತ ಖರೀದಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೆಂಪು ಕುಚಲಕ್ಕಿಯ ಭತ್ತವನ್ನೇ ಖರೀದಿಸಿ ಭತ್ತವನ್ನು ನಮ್ಮಲ್ಲಿಯೇ ಸಂಸ್ಕರಣೆ ಮಾಡಲಾಗುತ್ತದೆ ಎಂದು ಪ್ರಕಟಿಸಿದರು.
ಕೇಂದ್ರ ಸರ್ಕಾರವು ಕುಚಲಕ್ಕಿ ಮಾಡುವ ತಳಿಗಳಾದ ಜಯ, ಅಭಿಲಾಷ ಜ್ಯೋತಿ, ಎಂಬ 4 ಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ, ಪ್ರತಿ ಕ್ವಿಂಟಾಲ್‌ಗೆ 2,040 ರೂ. ಕೊಡುತ್ತಿದೆ. 13 ಲಕ್ಷ ಕ್ವಿಂಟಾಲ್ ಭತ್ತ ಖರೀದಿಯ ಗುರಿ ಇದ್ದೂ ಈ ಮೇಲಕ್ಕೆ 8.50 ಲಕ್ಷ ಕ್ವಿಂಟಾಲ್ ಭತ್ತ ಬರುವ ಅಂದಾಜಿದೆ. ಇದನ್ನು ವಿತರಿಸಲಾಯಿತು.

ನಿಮ್ಮದೊಂದು ಉತ್ತರ