ತಾಲೂಕು ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ಸಂಸ್ಥೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಆರೋಪ: ಸೋಮನಾಥ ನಾಯಕ್ ಕೋಟಿ೯ಗೆ ಹಾಜರು

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ಸಂಸ್ಥೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ್ ನಾಯಕ್ ಅವರಿಗೆ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದು, ಸುಪ್ರೀಂ ಕೋರ್ಟ್ ಮೇಲ್ಮನವಿ ವಜಾ ಗೊಂಡ ಅವರು ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ನ್ಯಾಯಾಲಯದ ಪ್ರಕ್ರಿಯೆಗಳು ನಡೆದ ಬಳಿಕ ಕೋಟಿ೯ನ ಆಮಿನ್ ಮೂಲಕ ಸೋಮನಾಥ ನಾಯಕ್ ಅವರನ್ನು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಸಂತ ಬಂಗೇರ, ಲಕ್ಷ್ಮೀಶ ತೋಳ್ಪಾಡಿ, ರಂಜನ್ ರಾವ್, ವಿದ್ಯಾ ನಾಯಕ್, ಬಿಎಂ ಭಟ್, ಸಿ.ಕೆ ಚಂದ್ರಕಲಾ, ಬಾಬು, ನೇಮಿರಾಜ್ ಕಿಲ್ಲೂರು, ಪರಮೇಶ್ವರ್, , ಸಂಜೀವ, ದಯಾನಂದ ಪೂಜಾರಿ, ಹಿಂದೂ ಹಿತ ಚಿಂತನ ವೇದಿಕೆ ಅಧ್ಯಕ್ಷ ಸೋಮಶೇಖರ್ ದೇವಸ್ಯ, ಕೆ ಸೋಮ, ಕರಿಯ ಧರ್ಮಸ್ಥಳ ,ಚಂದಪ್ಪ ಧರ್ಮಸ್ಥಳ, ವಿಠ್ಠಲ ಧರ್ಮಸ್ಥಳ , ಕೆ.ನೇಮಿರಾಜ್,
ಯಶವಂತ ಬಾಳಿಗ, ಬಿ.ಕೆ.ವಸಂತ್,
ಚಂದು ಎಲ್, ಪ್ರಭಾಕರ ಶಾಂತಿಕೋಡಿ, ಬಾಬಿ ಮಾಲಾಡಿ,ಶೇಖರ್ ಎಲ್, ಸಂಜೀವ ಆರ್
ಶ್ರೀನಿವಾಸ ಉಜಿರೆ, ಮಂಜುನಾಥ ಎಲ್ ಹಾಗೂ ನಾಗರಿಕ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ