ಗುರುವಾಯನಕೆರೆ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ವೈದ್ಯಕೀಯ ತರಗತಿಗಳ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಆಗ್ನೆಯ ಡಿ ಎ 581, ಆದಿತ್ಯ ಕೃಷ್ಣ ಕೆ. 580,ಉಜ್ವಲ ಎನ್.ಕೆ ರಾಷ್ಟ್ರ ಮಟ್ಟದ ಕೆಟಗರಿ ರಾಂಕಿಂಗ್ ನಲ್ಲಿ 1022 ರಾಂಕ್ ಗಳಿಸಿದ್ದಾರೆ. ಎಕ್ಸೆಲ್ ಕಾಲೇಜಿನ 180 ವಿದ್ಯಾರ್ಥಿಗಳ ಪೈಕಿ ಒಟ್ಟು 73 ವಿದ್ಯಾರ್ಥಿಗಳು 525 ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. 172 ವಿದ್ಯಾರ್ಥಿಗಳು ವೈದ್ಯಕೀಯ ತರಗತಿಗಳ ಪ್ರವೇಶಾತಿಗೆ ಅರ್ಹತೆ ಪಡೆದಿದ್ದಾರೆ. ನೀಟ್, ಜೆ ಇ ಇ ಸಿ ಇ ಟಿ, ನಾಟ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ತರಬೇತಿ ನೀಡಲಾಗುತ್ತಿದೆ.