ಧರ್ಮಸ್ಥಳ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಂ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ 14ನೇ ವರ್ಧಂತಿ ಸೆ.3 ರಂದು ಗುರುದೇವ ಮಠದಲ್ಲಿ ವೈದಿಕ ವಿಧಿ ವಿಧಾನ ಗಳೊಂದಿಗೆ ಪ್ರಾರಂಭ ಗೊಂಡಿತು.
ಶ್ರೀ ಗುರುದೇವ ಮಠದಲ್ಲಿ ಯಜ್ಞ, ಬಳಿಕ ಶ್ರೀ ರಾಮ ಕ್ಷೇತ್ರ ನಿತ್ಯಾನಂದ ನಗರದಲ್ಲಿ ಶ್ರೀ ರಾಮ ಮತ್ತು ಪರಿವಾರ ದೇವರುಗಳಿಗೆ ವಿಶೇಷ ಪೂಜೆ ನಡೆಯಿತು. ಅನಂತರ ಮಠದಲ್ಲಿ ಸ್ವಾಮೀಜಿಯವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಬರಮಾಡಿಕೊಂಡು, ಪೀಠದಲ್ಲಿ ಕಿರೀಟ ಧಾರಣೆ ಪಾದುಕ ಪೂಜೆ ನಡೆಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಟ್ರಸ್ಟಿ ಚಿತ್ತಂರಜನ್ ಗರೋಡಿ, ಬಿ. ಭುಜಬಲಿ ಧರ್ಮಸ್ಥಳ, ಹರಿಕೃಷ್ಣ
ಬಂಟ್ವಾಳ, ಪಿ. ಕೆ. ರಾಜು ಪೂಜಾರಿ ಕಾಶಿಪಟ್ಟ ಶ್ರೀ ರಾಮ ಕ್ಷೇತ್ರ ಸಮಿತಿ ಸಂಚಾಲಕ ಜಯಂತ್ ಕೋಟ್ಯಾನ್, ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ರವಿ ಕುಮಾರ್ ಭಟ್ ಪಜಿರಡ್ಕ, ಅಶೋಕ ಶಿವಮೊಗ್ಗ, ಅಣ್ಣಿ ಪೂಜಾರಿ ಉಜಿರೆ, ಟ್ರಸ್ಟಿ ತುಕಾರಾಂ ಸಾಲಿಯಾನ್, ರವೀಂದ್ರ ಪೂಜಾರಿ ಅರ್ಲ, ಶ್ರೀನಿವಾಸ ರಾವ್ ಧರ್ಮಸ್ಥಳ, ಸೀತಾರಾಮ್ ಬಿ . ಎಸ್. ವಿವಿಧ ಜಿಲ್ಲಾ ಮತ್ತು ತಾಲೂಕಿನ ಭಕ್ತ ವೃಂದ, ಸ್ವಾಮೀಜಿಯವರ ಶಿಷ್ಯರು ಊರವರು ಉಪಸ್ಥಿತರಿದ್ದರು.