ಬೆಳ್ತಂಗಡಿ: ಆ.15 ರಂದು 75ನೇಯ ಸ್ವಾತಂತ್ರೋತ್ಸವ ಅಮೃತ ಮಹೋತ್ಸವವನ್ನು ತಾಲ್ಲೂಕಿನ ಜನರು ನೆನಪಿಸಿಕೊಳ್ಳುವಂತೆ ಗುರುವಾಯನಕೆರೆಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮನ ಸಭಾ ಭವನದಲ್ಲಿ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ತಾಲೂಕಿನಾದ್ಯಂತ ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆದರೆ ಇದರಲ್ಲಿ ವಿಶೇಷ ಎಂದರೆ ಹರೀಶ್ ಪೂಂಜ ಅವರ ತಂದೆಯವರು ಕೂಡ ಜನರ ನಡುವೆ ನಿಂತುಕೊಂಡೇ ಕಾರ್ಯಕ್ರಮವನ್ನು ವೀಕ್ಷಿಸಿದರು. ಬೇರೆ ಯಾರಾದರೂ ಶಾಸಕರಾದರೆ ಅವರ ಮನೆಯವರಿಗೆ ವೇದಿಕೆಯ ಎದುರು ಮೊದಲನೇ ಸಾಲು ಮೀಸಲಾಗುತ್ತಿತ್ತು.ಆದರೆ ಶಾಸಕರ ತಂದೆ ಸಭಾಂಗಣದ ಹಿಂದೆ ಜನರ ನಡುವೆ ನಿಂತುಕೊಂಡೇ ಕಾರ್ಯಕ್ರಮದಲ್ಲಿ ಇರುವುದನ್ನು ಈ ಚಿತ್ರದಲ್ಲಿ ಕಾಣಬಹುದು.
ಎಂತಹ ಸರಳ ವ್ಯಕ್ತಿ ನೋಡಿ… ಸರಳತೆಗೆ ಇನ್ನೊಂದು ಹೆಸರೇ….
“ಶಾಸಕರು ಮತ್ತು ಅವರ ತಂದೆ”