ಬೆಳ್ತಂಗಡಿ: ಕಳೆದ ಒಂದು ತಿಂಗಳಿನಿಂದ ಬೆಳ್ತಂಗಡಿ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಜು.23 ರಂದು ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಿತ್ತಬಾಗಿಲು, ಮಲವಂತಿಗೆ, ದಿಡುಪೆ, ಚಾಮಾ೯ಡಿ, ನೆರಿಯ ಮೊದಲಾದ ಪ್ರದೇಶಗಳಲ್ಲಿ ಮಳೆಯಿಂದ ಹಾನಿಗೊಳಗಾದ ಮನೆ, ಶಾಲೆ, ಅಂಗನವಾಡಿ ಹಾಗೂ ಭೂಕುಸಿತ ಪ್ರದೇಶಗಳನ್ನು ವೀಕ್ಷಿಸಿದರು.
..ಕಿಲ್ಲೂರು ಹಿ.ಪ್ರಾ ಶಾಲೆಯ ಹಳೆ ಕಟ್ಟಡವನ್ನು ಪರಿಶೀಲಿಸಿ ಮಕ್ಕಳೊಂದಿಗೆ ಮಾತುಕತೆ ನಡೆಸಿ, ಮಿತ್ತಬಾಗಿಲು ಗ್ರಾಮದ ಅಂಗನವಾಡಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ನಾವೂರು ಗ್ರಾ.ಪಂ ಅಧ್ಯಕ್ಷ ್ಣೇಶ್ ಗೌಡ ನಾವೂರು, ಮಿತ್ತ್ ಬಾಗಿಲು ಗ್ರಾ.ಪಂ ಉಪಾಧ್ಯಕ್ಷರಾದ ವಿನಯ ಕುಮಾರ್ ಸೇನದಬೆಟ್ಟು, ಕಿಲ್ಲೂರು ಶಾಲಾ ಹೆಚ್.ಎಂ ರಮೇಶ್ ಪೈಲಾರ್, ಎಸ್ ಡಿ ಎಂ ಸಿ ಅಧ್ಯಕ್ಷ ುಮೇಶ್ ಪೂಜಾರಿ ಉಪಸ್ಥಿತರಿದ್ದರು.
ಇನ್ನೂ ಮಳೆಯಿಂದಾಗಿ ಗುಡ್ಡ ಕುಸಿದು ಮನೆಗೆ ಅಪಾರ ಹಾನಿಗೊಳಗಾದ ಮಲವಂತಿಗೆ ಗ್ರಾಮದ ಪರಾರಿ ಗುಡ್ಡೆ ಸುಂದರ ಪೂಜಾರಿಯವರ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಅವರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಕಡಿರುದ್ಯಾವರ ಗ್ರಾ.ಪಂ ಅಧ್ಯಕ್ಷ ಅಶೋಕ್ ಕುಮಾರ್, ಮಲವಂತಿಗೆ ಗ್ರಾ.ಪಂ ಉಪಾಧ್ಯಕ್ಷ ದಿನೇಶ್ ಗೌಡ, ತೀಕ್ಷಿತ್ ದಿಡುಪೆ, ಪ್ರಮೋದ್ ದಿಡುಪೆ, ಕೇಶವ ಫಡಕೆ ಮೊದಲಾದವರು ಉಪಸ್ಥಿತರಿದ್ದರು.