ಜಿಲ್ಲಾ ವಾರ್ತೆತಾಲೂಕು ಸುದ್ದಿರಾಜ್ಯ ವಾರ್ತೆ

ಇಂದು ಬೆಳ್ತಂಗಡಿಗೆ ಆಗಮಸುತ್ತಿರುವ ಪೂಜ್ಯ ದರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭವ್ಯವಾಗಿ ಸ್ವಾಗತಿಸುವ ಕಾರ್ಯ ಕ್ರಮ

ಚಾರ್ಮಾಡಿಯ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬಳಿಯಿಂದ ವಾಹನ ಜಾಥಾ
ಬೆಳ್ತಂಗಡಿ: ರಾಜ್ಯ ಸಭೆಯ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಬಳಿಕ ಬೆಳ್ತಂಗಡಿಗೆ ಆಗಮಸುತ್ತಿರುವ ಪೂಜ್ಯದರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭವ್ಯವಾಗಿ ಸ್ವಾಗತಿಸುವ ಉದ್ದೇಶದಿಂದ ಚಾರ್ಮಾಡಿಯ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬಳಿಯಿಂದ ವಾಹನ ಜಾಥದ ಮೂಲಕ ಬರಮಾಡಿಕೊಳ್ಳಲು ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಅಭಿಮಾನಿಗಳು ಸಿದ್ಧತೆ ಕೈಗೊಂಡಿದ್ದಾರೆ.

ಜು.9 ರಂದು ಸಂಜೆ 5 ಗಂಟೆಗೆ ಸರಿಯಾಗಿ ಚಾರ್ಮಾಡಿಯಿಂದ ವಾಹನ ಜಾಥಾದ ಮೂಲಕ ಶ್ರೀ ಕ್ಷೇತ್ರದ ವರೆಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುವುದು.

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಬಳಿಕ ಮುಖ್ಯಮಂತ್ರಿಗಳು ಸಹಿತ ನಾಡಿನೆಲ್ಲೆಡೆಯಿಂದ ಗಣ್ಯಾತಿಗಣ್ಯರಿಂದ, ಭಕ್ತರಿಂದ, ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರವೇ ಹರಿದುಬಂದಿತ್ತು. ಇದೀಗ ಕ್ಷೇತ್ರದ ಜನತೆ ಶುಭಹಾರೈಕೆಗೆ ಕಾತರರಾಗಿದ್ದಾರೆ. ವಾಹನ ಜಾಥಾದಲ್ಲಿ ತಾಲೂಕಿನ ಅಭಿಮಾನಿ, ಭಕ್ತ ಬಂಧುಗಳೆಲ್ಲ ಭಾಗಿಯಾಗಬೇಕೆಂದು ಶಾಸಕರು ವಿನಂತಿಸಿದ್ದಾರೆ.

ನಿಮ್ಮದೊಂದು ಉತ್ತರ