ತಾಲೂಕು ಸುದ್ದಿ

ಧಮ೯ಸ್ಥಳದಲ್ಲಿ 8ನೇ ವಿಶ್ವ ಯೋಗ ದಿನಾಚರಣೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇದರ ಸಹಯೋಗದಲ್ಲಿ 8ನೇ ವಿಶ್ವ ಯೋಗ ದಿನಾಚರಣೆ 2022 ಯನ್ನು ಜೂ.21 ರಂದು ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಜರುಗಿತು.


ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪರಮಾನಂದ ಓಂ ಜೀ ಮಹಾರಾಜ್, ಸುಪೀರಿಯರ್, ಬೆಥನಿ ಆಶ್ರಮ, ನೆಲ್ಯಾಡಿ ಮತ್ತು ಪ್ರಾಂಶುಪಾಲರು ಜ್ಷಾನೋದಯ ಬೆಥನಿ ಪಿಯು ಸ್ಕೂಲ್ ರೆ|ಫಾ|ಥೋಮಸ್ ಬಿಜಿಲಿ

ಒಐಸಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉಪಕಾರ್ಯದರ್ಶಿ ನಸೀಮಾ ಬಿ.ಐ, ಉಜಿರೆ ಶ್ರೀ.ಧ.ಮಂ ಎಜ್ಯುಕೇಶನಲ್ ಸೊಸೈಟಿ ಉಪಕಾರ್ಯದರ್ಶಿ ಡಾ.ಸತೀಶ್ಚಂದ್ರ‌ಸುಯ೯ಗುತ್ತು ಎಸ್.ಉಪಸ್ಥಿತರಿದ್ದರು.

ಯೋಗ ನಿರ್ದೇಶಕರಾದ ಶಶಿಕಾಂತ್ ಜೈನ್,  ಡಾ| ಶಶಿಕಾಂತ್ ದೀನ್, ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ ಉಪಸ್ಥಿತರಿದ್ದರು.

ಉಜಿರೆಎಸ್.ಡಿ.ಎಂ.ಸಿ.ಎನ್,ವೈ.ಎಸ್ & ಹೆಚ್ ಪ್ರಾಂಶುಪಾಲ, ಮುಖ್ಯ ವೈದ್ಯಾಧಿಕಾರಿ ಡಾ.ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಡೀನ್ ಡಾ. ಶಿವಪ್ರಸಾದ್ ಶೆಟ್ಟಿ ವಂದಿಸಿದರು.

ನಿಮ್ಮದೊಂದು ಉತ್ತರ