ಆರಂಬೋಡಿ: ಗ್ರಾಮ ಪಂಚಾಯತು ಆರಂಬೋಡಿ, ಕಂದಾಯ ಇಲಾಖೆ ಹಾಗೂ ಎಲ್ಲಾ ಇಲಾಖೆಗಳ ಸಹಕಾರದಲ್ಲಿ ಕರ್ನಾಟಕ ಸರಕಾರದ `ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮದಂತೆ ಜೂನ್ ತಿಂಗಳ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ವೇಣೂರು ಹೋಬಳಿಯ ಆರಂಬೋಡಿ ದ.ಕ ಜಿ.ಪಂ ಹಿ.ಪ್ರಾ ಶಾಲೆ ಹೊಕ್ಕಾಡಿಗೋಳಿಯಲ್ಲಿ ಜೂ.17ರಂದು ಆರಂಭಗೊಂಡಿತು.
ಕಾರ್ಯಕ್ರಮವನ್ನು ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ. ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಆರಂಬೋಡಿ ಗ್ರಾಮ ಪಂಚಾಯತದ ಉಪಾಧ್ಯಕ್ಷ ಪ್ರವೀಣ್ ಚಂದ್ರ ಜಂತ್ತೋಡಿ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ ,ತೋಟಗಾರಿ ಇಲಾಖೆಯ
ಚಂದ್ರಶೇಖರ್, ಕೃಷಿ ಇಲಾಖೆಯ ಚಿದಾನಂದ ಹೂಗಾರ, ಸಿಡಿಪಿಓ ಪ್ರಿಯಾ ಆಗ್ನೇಶ್, ಭೂದಾಖಲೆಗಳ ಸಹಾಯಕ ನಿರ್ದೇಶಕ ರೇಣುಕಾ ನಾಯ್ಕ, ಉಪ ತಹಶೀಲ್ದಾರ್ ಮಲ್ಲಪ್ಪ ನಡುಗಡ್ಡಿ, ಗ್ರಾ.ಪಂ ಸದಸ್ಯರಾದ ಪ್ರಭಾಕರ್,
ಸುದಶ೯ನ್, ಸತೀಶ್ ಮಠ, ರಮೇಶ್, ದೀಕ್ಷಿತಾ, ಪಿಡಿಓ ಗಣೇಶ್ ಶೆಟ್ಟಿ, ಗ್ರಾಮ ಕಾರಣಿಕ ಆಶ್ರಫ್, ಮೆಸ್ಕಾಂ ಇಲಾಖೆಯ ಬೂಬ ಶೆಟ್ಟಿ, ಆಹಾರ ಇಲಾಖೆಯ ವಿಶ್ವ, ಬಿ.ಸಿ.ಎಂನ ಜೋಸೆಫ್, ಇಂಜಿನಿಯರ್ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.