ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಅಗಲಿದ ಶ್ರೀ.ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಆಗಿದ್ದಂತಹ ಡಾ ಬಿ.ಯಶೋವರ್ಮರಿಗೆ ನುಡಿನಮನ ಅರ್ಪಿಸಲಾಯಿತು.
ಮರೆಯಾದ ಮಾಣಿಕ್ಯ ಡಾ.ಬಿ.ಯಶೋವರ್ಮ ಇವರ ಭಾವಚಿತ್ರಕ್ಕೆ ಶಾಲಾ ಸಂಚಾಲಕರಾದ ಅನಂತ ಪದ್ಮನಾಭ ಭಟ್ ಅವರು ಶಾಲಾಮುಖ್ಯೋಪಾಧ್ಯಾ
ಯಿನಿ ಶಿಕ್ಷಕ ಬಂಧು ಹಾಗೂ ತರಗತಿ ನಾಯಕರೊಂದಿಗೆ ಜೊತೆಗೂಡಿ ಪುಷ್ಪನಮನವನ್ನು ಅರ್ಪಿಸಲಾಯಿತು.ನಂತರ ಶಾಲಾ ಸಂಚಾಲಕರು ಶಾಂತಿ ಮಂತ್ರ ಪಠಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ. ಡಾ.ಬಿ.ಯಶೋವರ್ಮ ಅವರ ಕುರಿತು ಶಾಲೆ ಹಾಗೂ ಅವರ ಒಡನಾಟ,ಅವರ ಧ್ಯೇಯ ಕನಸು ಯೋಚನೆ ಯೋಜನೆ ಹಾಗೂ ಅವರ ಶಿಕ್ಷಣದ ಕುರಿತಾದ ಸೃಜನ ಶೀಲತೆ,ಹೊಸತನದ ಅದಮ್ಯ ಉತ್ಸಾಹದ ಕುರಿತು ಮಾತನಾಡುತ್ತಾ ಅವರ ಕನಸು ನನಸಾಗಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ.ಅವರು ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲ ನಿಜ ಆದರೆ ನಾವು ಮಾಡುವ ಕೆಲಸಗಳಲ್ಲಿ ಅವರಿದ್ದಾರೆ ಎಂದು ನುಡಿದರು.
ಡಾ.ಬಿ.ಯಶೋವರ್ಮ ಅವರ ಜೀವನದ ಪಕ್ಷಿನೋಟದ ವಿಡಿಯೋ ಹಾಗೂ ಅವರ ಕನಸನ್ನು ನನಸಾಗಿಸಿದ ಶಾಲೆಯ ಸೃಜನಶೀಲ ಚಟುವಟಿಕೆಗಳ ವಿಡಿಯೋ ಪ್ರದರ್ಶನವನ್ನು ಮಾಡಲಾಯಿತು.ಅವರ ಕುರಿತಾದ ವಿದ್ಯಾರ್ಥಿಗಳು ತಾವೇ ರಚಿಸಿದ ಹಾಡುಗಳನ್ನು ಹಾಡಿ,ತಾವೇ ರಚಿಸಿದ ಕವನ ಗಳನ್ನು ಹಾಡಿನ ಮೂಲಕ ಗಾನ ನಮನ ಅರ್ಪಿಸಲಾಯಿತು.
ಮಾಸ್ಟರ್ ಅಭಯ್ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಕುಮಾರಿ ಹರಿಣಿ ಸ್ವಾಗತಿಸಿ, ಕುಮಾರಿ ಅಮೃತಾಳ ಧನ್ಯವಾದದೊಂದಿಗೆ ಕೊನೆಗೊಂಡಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಧ್ರುವನಕ್ಷತ್ರದಅಗಲಿಕೆಯ ಭಾರವಾದ ಹೃದಯದಿಂದ ಅವರ ಕನಸನ್ನು ನನಸುಮಾಡುವ ಜವಾಬ್ದಾರಿ ಹೊತ್ತುಕೊಂಡು ಕಾರ್ಯಕ್ರಮ ಕೊನೆಗೊಂಡಿತು.