ಕೊಕ್ಕಡ: ಹಿಂದೂಗಳ ಶ್ರದ್ದಾ ಕೇಂದ್ರವಾದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಭಕ್ತಾಧಿಗಳನ್ನು ಲವ್ ಜಿಹಾದ್ ಹಾಗೂ ದುಷ್ಕೃತ್ಯ ನಡೆಸುತ್ತಿರುವುದು ಕಂಡು ಬರುತ್ತಿರುವುದರಿಂದ ಹಿಂದೂಯೇತರ ಆಟೋ, ಟ್ಯಾಕ್ಸಿ ಮೊದಲಾದ ವಾಹನಗಳ ಪ್ರವೇಶವನ್ನು ನಿಬಂ ಧಿಸಿ
ವಿಶ್ವ ಹಿಂದು ಪರಿಷತ್ ಭಜರಂಗದಳ, ಹಿಂದೂ ಜಾಗರಣ ವೇದಿಕೆ ಕೊಕ್ಕಡ ಎಂಬ ಹೆಸರಿನ ನಾಮ ಫಲಕವನ್ನು ಸೌತಡ್ಕಕ್ಕೆ ಹೋಗುವ ರಸ್ತೆ ಬದಿಯಲ್ಲಿ ಹಾಕಲಾಗಿದೆ.
ಈಗ ಈ ಫಲಕದ ಫೋಟೋ ಎಲ್ಲಾ ಕಡೆಗಳಲ್ಲಿ ವೈರಲ್ ಆಗುತ್ತಿದೆ.ಇತ್ತೀಚೆಗೆ ಸೌತಡ್ಕಕ್ಕೆ ಬಂದಿದ್ದ ಬೆಂಗಳೂರಿನ ಹಿಂದೂ ಯುವತಿಯೋವ೯ಳನ್ನು ಆನ್ಯಕೋಮಿನ ಯುವಕ ರಿಜಿಸ್ಟ್ರಾರ್ ಮದುವೆಯಾಗಿರುವ ಅವರ ಮದುವೆ ಧೃಡಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕೊಕ್ಕಡದಲ್ಲಿ ಸಂಚಲನ ಮೂಡಿಸಿತ್ತು.