ತಾಲೂಕು ಸುದ್ದಿ

ವರ ಹಾರ ಹಾಕುವಾಗ ಕೈ ತಾಗಿಸಿದನೆಂದು ಹಾರವನ್ನೇ ಎಸೆದ ವಧು: ಮುರಿದು ಬಿದ್ದ ಮದುವೆ

ನಾರಾವಿ: ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದರಲ್ಲಿ ವರ ಹಾರ ಹಾಕುವಾಗ ಕೈ ತಾಗಿಸಿದನೆಂದು ವಧು ಹಾರವನ್ನೇ ಎಸೆದು ಮದುವೆ ಮುರಿದು ಬಿದ್ದ ಘಟನೆ ನಾರಾವಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಮಧುಮಗ ವಧುವಿನ ಕುತ್ತಿಗೆಗೆ ಇನ್ನೇನು ಹಾರ ಹಾಕಬೇಕಿತ್ತು ಅದರಂತೆ ಆತ ಹಾರ ಹಾಕುತ್ತಿದ್ದ ಆಗ ಶುರುವಾಗಿತ್ತು ಜಗಳ. ವರ ಹಾರ ಹಾಕುವಾಗ ವರ ಕೈ ತಾಗಿಸಿದ ಎನ್ನುತ್ತಾ ವಧು ತಗಾದೆ ತೆಗೆದಿದ್ದಾಳೆ. ವರ ಹಾರ ಹಾಕುವಾಗ ವಧುವಿನ ಕೊರಳಿಗೆ ಮತ್ತು ಕಿವಿ ವರನ ಕೈ ತಾಗಿರುವುದಕ್ಕೆ ವಧು ಸಿಟ್ಟಾಗಿದ್ದಾಳೆ.

ತದನಂತರ ಮಾತುಕತೆಯ ಬಳಿಕ ಕಾರ್ಯಕ್ರಮ ಮುಂದುವರೆಯಿತಾದರೂ ಇನ್ನೇನು ಮುಹೂರ್ತದ ಸಮಯ ಕೂಡಿಬಂದಾಗ ವರನು ಇನ್ನೇನು ತಾಳಿ ಕಟ್ಟಬೇಕು ಎಂದು ಮುಂದಾದಾಗ ವಧು ತಾಳಿಯ ಸಹಿತ ಹೂವಿನ ಹಾರವನ್ನು ಎಸೆದು ಮದುವೆ ಬೇಡವೆಂದಿದ್ದಾಳೆ. ಇದರಿಂದ ವರ ಆಶ್ಚರ್ಯಗೊಂಡು ಸಮಾರಂಭದಲ್ಲೇ ಹೆಣ್ಣು ಗಂಡಿನ ಕುಟುಂಬಗಳೆರಡು ಮಾತಿಗೆ ಮಾತ ಬೆಳೆದುಕೊಂಡಿದ್ದು ಸಣ್ಣ ಮಟ್ಟಿನ ಜಗಳ ಪ್ರಾರಂಭವಾದಾಗ ವೇಣೂರು ಪೊಲೀಸರ ಆಗಮನವಾಗಿದೆ. ಬಳಿಕ ಪೊಲೀಸರ ಸಮ್ಮುಖದಲ್ಲಿ ಮಾತುಕತೆ ನಡೆದಿದ್ದು ವಧು ಗಂಭೀರ ಆರೋಪ ಮಾಡಿದ್ದಾಳೆ. ಮದುವೆ ನಿಶ್ಚಯ ಕಾರ್ಯಕ್ರಮಕ್ಕೆ
ಬಂದ ವರ ಬೇರೆ, ಹೆಣ್ಣು ನೋಡಲು ಬಂದ ವರ ಬೇರೆ ಈಗ ಮದುವೆಯಾಗುತ್ತಿರುವ ವರ ಬೇರೆಯವನೇ ಎಂದು ಅಚ್ಚರಿಯಮಾತನ್ನು ತಿಳಿಸಿದ್ದಾಳೆ.

ವರನ ಕಡೆಯವರಿಂದಲೂ ದೂರು: ‌ಈ ನಡುವೆ ವರನ ಕಡೆಯವರು ಪೊಲೀಸರಿಗೆ ದೂರು‌ ನೀಡಿದ್ದು,ಮಂಟಪ ದಲ್ಲಿ ಸುಮಾರು 300 ಜನ ಅತಿಥಿಗಳ ಸಮಕ್ಷಮದಲ್ಲಿ ವದು ವರರು ಹಾರ – ಬದಲಾವಣೆ ಮಾಡುವಾಗ ವಧುವೂ ಮಾನಸಿಕ ಅಸ್ವಸ್ಥಳಂತೆ ನಟಿಸಿ, ತನ್ನ ಕುತ್ತಿಗೆಯಿಂದ ಹಾರವನ್ನು ತೆಗೆದು ಹಾಕಲು ಪ್ರಯತ್ನಿಸಿ ಕರಿಮಣಿ ಸರವನ್ನು  ವರನಿಂದ ಕಟ್ಟಿಸಿಕೊಳ್ಳದೆ ನನಗೆ ಮದುವೆ ಬೇಡವೆಂದು ರಸ್ತೆಗೆ ಓಡಿ ಹೋಗಲು ಪ್ರಯತ್ನಿಸಿರುತ್ತಾಳೆ.ಮಾನಸಿಕವಾಗಿ  ಮದುವೆಗೆ ಇಷ್ಟ ಇಲ್ಲದಿರುವ ವಧುವನ್ನು ನಮ್ಮ ಗಮನಕ್ಕೆ ತಾರದೇ ನಮಗೆ ಸುಳ್ಳು ಮಾಹಿತಿ ನೀಡಿ ನಮ್ಮನ್ನು ವಂಚಿಸಿರುತ್ತಾರೆ, ವಧುವಿನ ಕಡೆಯವರು ಹೀಗೆ ಮಾಡಿರುವುದರಿಂದ ನಮಗೆ ಮಾನಸಿಕ ಹಾಗೂ ಆರ್ಥಿಕವಾಗಿ ತುಂಬಾ ನಷ್ಟ ಉಂಟಾಗಿದೆ. ನಾವು ಸುಮಾರು 500 ಜನ ಅತಿಥಿಗಳ ಸತ್ಕಾರಕ್ಕಾಗಿ ಊಟ ಉಪಚಾರಗಳ ವ್ಯವಸ್ಥೆ ಮಾಡಿದ್ದು ಹಾಗೂ ಸಬಾಂಗಣದ ವೆಚ್ಚ ಒಟ್ಟು ಸೇರಿ ಅಂದಾಜು ಮೊತ್ತ ರೂ.2,00,000/- (ರೂಪಾಯಿ ಎರಡು ಲಕ್ಷ ) ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ