ಬೆಳ್ತಂಗಡಿ: ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಬೆಳ್ತಂಗಡಿ ಇದರ ಸಾಂತ್ವನಾ ಕೇಂದ್ರದ ದಶಮಾನೋತ್ಸವದ ಕಾರ್ಯಕ್ರಮವು ಮೇ.16ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಟಿ.ಪಾಪ ಬೋವಿ ಕಾರ್ಯಕ್ರಮ ಉದ್ಘಾಟಿಸಿದರು.
ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶಾಂತ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪೋಲಿಸ್ ಉಪನಿರೀಕ್ಷಕ ನಂದ ಕುಮಾರ್, ಸಿ.ಡಿ.ಪಿ.ಒ ಪ್ರೀಯಾ ಆಗ್ನೆಸ್,ನಿವೃತ್ತ ಪೋಲೀಸ್ ಇನ್ಸೆಕ್ಟರ್ ಸುದರ್ಶನ್ ಎಂ, ಬೆಳ್ತಂಗಡಿ ಜೆಸಿಐ ಅಧ್ಯಕ್ಷ ಪ್ರಸಾದ್ ಬಿ.ಎಸ್, ಒಕ್ಕೂಟದ ಗೌರವಾಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ, ಜತೆ ಕಾರ್ಯದರ್ಶಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ಮಂಡಲಗಳ ಒಕ್ಕೂಟದ ಕೋಶಾಧಿಕಾರಿ ಉಷಾ ಲಕ್ಷ್ಮಣ ಗೌಡ,ಕಾರ್ಯಕಾರಿ ಸಮಿತಿ ಸದಸ್ಯರಾದ ಮೇದಿನಿ ಡಿ ಗೌಡರಮಾ ಎಸ್ ಪರಾಂಜಪೆ,ವಿನೋಧಿನಿ ರಾಮಪ್ಪಯಶೋಧ ಲಾಯಿಲ,ಗೌರವ ಸಲಹೆಗಾರರಾದ ಗೌರಿ ಪಣಿಕ್ಕಲ್,ವರದಬಾಯಿಕುಮುದಾ ಕಾರಂತ್ ಹಾಗೂ ಸಾಂತ್ವಾನ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮ: ದಕ್ಷ ಪೊಲೀಸ್ ಅಧಿಕಾರಿ ಚಿನ್ನದ ಪದಕ ವಿಜೇತ ಪೋಲಿಸ್ ಉಪನೀರಿಕ್ಷಕ ನಂದ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಾಂತ್ವನಕೇಂದ್ರದಲ್ಲಿಕಾರ್ಯನಿರ್ವಹಿ
ಸುತ್ತಿರುವ ಸೌಮ್ಯಶ್ರಿ ಶೆಟ್ಟಿ ಅವರಿಗೆ ಸನ್ಮಾನ ನಡೆಯಿತು.
ಮಹಿಳಾ ಮಂಡಳಗಳ ಒಕ್ಕೂಟದ ಉಪಾಧ್ಯಕ್ಷೆ ಸವಿತಾ ಜಯದೇವ್ ಸ್ವಾಗತಿಸಿದರು. ಗೌರವಾಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ ಪ್ರಸ್ತಾವಿಕ ಮಾತನಾಡಿದರು, ಶುಭ ರೈ ನಿರೂಪಿಸಿದರು.