ಬೆಳ್ತಂಗಡಿ ಶ್ರೀ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಬಳಿಯಿಂದ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ತನಕ ಬೃಹತ್ ಬೈಕ್ ರ್ಯಾಲಿ
ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150 ಸ್ಥಾನ: ಹರಿಕೃಷ್ಣ ಬಂಟ್ವಾಳ್
ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದು, ಬೆಳ್ತಂಗಡಿಯ ಹೆಮ್ಮೆಯ ಶಾಸಕರಾಗಿ
ಆಯ್ಕೆಯಾಗಿ, ತಾಲೂಕುನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುತ್ತಿರುವ, ಹರೀಶ್ ಪೂಂಜ ಅವರ ಶಾಸಕತ್ವ ಸ್ಥಾನಕ್ಕೆ 4 ವರ್ಷಗಳು ಸಂದ ಪ್ರಯುಕ್ತ ವಿಕಾಸ ಸಂಪರ್ಕ ಅಭಿಯಾನ ಕಾಯ೯ಕ್ರಮ ಮೇ.15ರಂದು ಉಜಿರೆ ಶಾರದ ಮಂಟಪದಲ್ಲಿ ಜರುಗಿತು.
ಬೆಳ್ತಂಗಡಿ ಶ್ರೀ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಬಳಿಯಿಂದ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ತನಕ ಬೃಹತ್ ಬೈಕ್ ರ್ಯಾಲಿ ನಡೆಯಿತು.
ನಂತರ ನಡೆದ ಸಮಾರಂಭದಲ್ಲಿ
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ
ಬಂಟ್ವಾಳ್ ಅವರು ಮಾತನಾಡಿ, ಬೆಳ್ತಂಗಡಿ ಇತಿಹಾಸದಲ್ಲಿ1ಸಾವಿರ ಬೈಕ್ ಗಳಲ್ಲಿ ಮೆರವಣಿಗೆ ನಡೆದಿರುವುದು ನೋಡಿಲ್ಲ , ಈ ಮೆರವಣಿಗೆ ನೋಡಿದಾಗ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150 ಸ್ಥಾನ ಪಡೆಯುತ್ತದೆ ಎಂಬುದನ್ನು ಬೆಳ್ತಂಗಡಿಯ ಕಾಯ೯ಕತ೯ರು ಇಂದು ತೋರಿಸಿ ಕೊಟ್ಟಿದ್ದಾರೆ ಎಂದರು. ಬೆಳ್ತಂಗಡಿ ಕ್ಷೇತ್ರಕ್ಕೆ ಸಿದ್ದರಾಮಯ್ಯ, ಡಿಕೆಶಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಬಂದರೂ ಈ ಕ್ಷೇತ್ರದಲ್ಲಿ ಗೆಲ್ಲುವುದು ಹರೀಶ್ ಪೂಂಜ ರೇ ಎಂಬುದನ್ನು 241 ಬೂತ್ ಗಳಿಂದ ತಾವೇ ಪೆಟ್ರೋಲ್ ಹಾಕಿಕೊಂಡು ಬೈಕ್ ನಲ್ಲಿ ಬಂದ ಕಾಯ೯ಕತ೯ರೇ ಸಾಕ್ಷಿ ಎಂದರು.
ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ತನ್ನ ನಾಲ್ಕು ವಷ೯ದ ಸೇವಾ ಅವಧಿ ಯಲ್ಲಿ ನವ ಬೆಳ್ತಂಗಡಿ ನಿಮಾ೯ಣಕ್ಕೆ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿಸಿದ್ದೇನೆ ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಮೂಲಕ ತಾಲೂಕಿನಲ್ಲಿ ಭಾಜಪಕ್ಕೆ ಶಕ್ತಿ ತುಂಬುವ ಕಾಯ೯ ಮಾಡಿದ್ದೇನೆ ಸರ್ಕಾರದಿಂದ ತಾಲೂಕಿನಲ್ಲಿ ಆದ ಪ್ರಗತಿಯನ್ನು ಜನಮಾನಸಕ್ಕೆಮುಟ್ಟಿಸುವ ಕಾಯ೯ವನ್ನು ಕಾಯ೯ಕ ತ೯ರು ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಮುಖ್ಯ ಅತಿಥಿ ಕುಶಾಲಪ್ಪ ಗೌಡ ಪೂವಾಜೆ ಅವರು ಮಾತನಾಡಿ, ರಾಜ್ಯ ದ 234 ಕ್ಷೇತ್ರದಲ್ಲಿ ಬೆಳ್ತಂಗಡಿ ಕ್ಷೇತ್ರವನ್ನು ಶಾಸಕ ಹರೀಶ್ ಪೂಂಜ ರಾಜ್ಯದಲ್ಲಿ ನಂಬ್ರ ಒನ್ ಸ್ಥಾನಕ್ಕೇರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು ಉಪಸ್ಥಿತರಿದ್ದರು.ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಸ್ವಾಗತಿಸಿದರು. ರಾಜೇಶ್ ಪೆಂಬು೯ಡ ಮತ್ತು ಶ್ರೀನಿವಾಸ್ ರಾವ್ ಧಮ೯ಸ್ಥಳ ಕಾಯ೯ಕ್ರಮ ನಿರೂಪಿಸಿ, ಸೀತಾರಾಮ ಬೆಳಾಲು ವಂದಿಸಿದರು.