ತಾಲೂಕು ಸುದ್ದಿ

ವಗಾ೯ವಣೆಗೊಂಡ ಇಬ್ಬರು ನ್ಯಾಯಾಧೀಶರುಗಳಿಗೆ ಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ಬೀಳ್ಕೊಡುಗೆ

ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ಕಳೆದ 3 ವರ್ಷಗಳಿಂದ ಹಿರಿಯ ವಿಭಾಗದ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂ ನಾಗೇಶಮೂರ್ತಿ ಬಿ.ಕೆ ಮತ್ತು ಪ್ರಧಾನ ಸಿವಿಲ್ ನ್ಯಾಯಾದೀಶರಾಗಿ ಕಾರ್ಯ ನಿರ್ವಹಿಸಿ ವರ್ಗಾವಣೆಗೊಂಡ ಸತೀಶ ಕೆ. ಜಿ ಇವರುಗಳಿಗೆ ಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರ ಮೇ.12 ರಂದು ವಕೀಲರ ಭವನದಲ್ಲಿ ನಡೆಯಿತು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಪ್ರಸಾದ್, ಹಿರಿಯ ವಕೀಲ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಆಗರ್ತ,ವಕೀಲ ಸಂಘದ ಉಪಾಧ್ಯಕ್ಷ ಗಣೇಶ್ ಗೌಡ, ಕಾರ್ಯದರ್ಶಿ ಶೈಲೇಶ್, ವೇದಿಕೆಯಲ್ಲಿ ಉಪಸ್ಥಿತರಿದ್ದರು ನಿಕಟ ಪೂರ್ವ ಅಧ್ಯಕ್ಷ ಎಲೋಶಿಯಸ್ ಲೋಬೊ,ಮಾಜಿ ಅಧ್ಯಕ್ಷರುಸೇವಿಯರ್ ಪಾಲಿಯರ್, ಹಿರಿಯ ವಕೀಲರು ಧನಂಜಯ ರಾವ್ ಬಿ.ಕೆ. ಸನ್ಮಾನಿತರ ಬಗ್ಗೆ ಮಾತನಾಡಿದರು,ಇದೆ ಸಂದರ್ಭದಲ್ಲಿ 20 ವರ್ಷಗಳಿಂದ ಸಹಾಯಕರಾಗಿದ್ದು ತುಮುಕೂರುರಿಗೆ ವರ್ಗಾವಣೆಗೊಂಡ ನರೇಶ್ ಗೌಡ ಇವರನ್ನು ಗೌರವಿಸಲಾಯಿತು ಕಿರಿಯ ವಕೀಲರು ಸಿಬ್ಬಂದಿಗಳು ಹಾಜರಿದ್ದರು

ಮನೋಹರ್ ಕುಮಾರ್ ಇಳಂತಿಲ ಕಾರ್ಯಕ್ರಮ ನಿರೂಪಿಸಿದರು ಸಂಘದ ಕಾರ್ಯದರ್ಶಿ ಶೈಲೇಶ್ ಟೊಸರ್ ಸ್ವಾಗತಿಸಿ ಕೋಶಾಧಿಕಾರಿ ಹರಿಪ್ರಕಾಶ್ ಪಿ. ಎನ್. ವಂದಿಸಿದರು ಮಾಡಿದರು.

ನಿಮ್ಮದೊಂದು ಉತ್ತರ