ತಾಲೂಕು ಸುದ್ದಿ

ಕಲಿಕಾ ಚೇತರಿಕೆ ತರಬೇತಿ ಕಾರ್ಯಕ್ರಮಕ್ಕೆ  ಶಾಸಕರಾದ  ಹರೀಶ್ ಪೂಂಜ ರಿಂದ ಚಾಲನೆ*

ಬೆಳ್ತಂಗಡಿ: ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಶೈಕ್ಷಣಿಕ ಯೋಜನೆ ಕಲಿಕಾ ಚೇತರಿಕೆ ಯ ಬೆಳ್ತಂಗಡಿ ತಾಲೂಕಿನ ತರಬೇತಿ ಕಾರ್ಯಕ್ರಮವನ್ನು ಇಂದು  ಶಾಸಕರಾದ  ಹರೀಶ್ ಪೂಂಜರವರು ಉದ್ಘಾಟಿಸಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ತಾಲೂಕಿನ ಸರಕಾರಿ ಶಾಲೆಗಳ ಸಮಸ್ತ ಶಿಕ್ಷಕರಿಗೆ ಗುರತಿನ ಚೀಟಿಯನ್ನು ವಿತರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ವಿರೂಪಾಕ್ಷಪ್ಪ ಎಚ್.ಎಸ್, ಸಮನ್ವಯಾಧಿಕಾರಿ  ಶಂಭು ಶಂಕರ್,
ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ತಾರಾಕೇಸರಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ  ರಮೇಶ್ ಮಯ್ಯ,ಕಾರ್ಯದರ್ಶಿ  ಮಹಮ್ಮದ್

ರಿಯಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ  ಸುರೇಶ್ ಮಾಚಾರ್,ಜಿಲ್ಲಾ ಸಂಘದ ಪದಾಧಿಕಾರಿ ರಾಜೇಶ್ ನೆಲ್ಯಾಡಿ,  ಶಿಕ್ಷಣ ಸಂಯೋಜಕರಾದ ಶ್ರೀಮತಿ ಚೇತನಾಕ್ಷಿ‌, ಸುಭಾಷ್ ಜಾಧವ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ  ಮೋಹನ್ ಕುಮಾರ್ ಹಾಗೂ ತಾಲೂಕಿನ ಎಲ್ಲಾ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಸಿ.ಆರ್.ಪಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.ಸುಮಾರು 350 ಶಿಕ್ಷಕರು ಮೊದಲ ತಂಡದಲ್ಲಿ ತರಬೇತಿ ಪಡೆದುಕೊಂಡರು.

ನಿಮ್ಮದೊಂದು ಉತ್ತರ