ತಾಲೂಕು ಸುದ್ದಿಸಾಧಕರು

ಪುತ್ತೂರು ವಕೀಲರ ಸಂಘ: ನೂತನ ಕೋಶಾಧಿಕಾರಿಯಾಗಿ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ಆಯ್ಕೆ

ಬೆಳ್ತಂಗಡಿ:ಪುತ್ತೂರು ವಕೀಲರ ಸಂಘದ 2022-24 ನೇ ಸಾಲಿನ ಕೋಶಾಧಿಕಾರಿ ಯಾಗಿ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ಆಯ್ಕೆಯಾಗಿದ್ದಾರೆ.
ಎ. 4 ರಂದು ನಡೆದ ಪುತ್ತೂರು ವಕೀಲರ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಆಯ್ಕೆನ್ನು ನಡೆಸಲಾಯಿತು.
ಮಂಗಳೂರು ವಿಶ್ವವಿಧ್ಯಾಲಯದ ಶೈಕಣಿಕ ಮಂಡಳಿಯ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ, ಇವರು ಪ್ರಸ್ತುತ ಪುತ್ತೂರಿನಲ್ಲಿ ಚಾಣಕ್ಯ ಚೇಂಬರ್ಸ್ ಎಂಬ ಸ್ವಂತ ಕಚೇರಿಯನ್ನು ಹೊಂದಿದ್ದು, ಕಳೆದ 12 ವರ್ಷಗಳಿಂದ ನ್ಯಾಯವಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು ಇಳಂತಿಲ ಗ್ರಾಮದ ಕೈಲಾರು ಬಾಲಕೃಷ್ಣ ಭಟ್ ಮತ್ತು ದೇವಕಿ ದಂಪತಿಗಳ ಪುತ್ರ.

ನಿಮ್ಮದೊಂದು ಉತ್ತರ