ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಕುರಿತು ಮಂಡಲ ಪದಾಧಿಕಾರಿಗಳು , ವಿವಿಧ ಮೋಚಾ೯ಗಳ, ಮಹಾ ಶಕ್ತಿ-ಶಕ್ತಿ ಕೇಂದ್ರ ಪ್ರಮುಖರು, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ‘ಸಂವಾದ’ ಕಾರ್ಯಕ್ರಮ ಫೆ. 6 ರಂದು ಬೆಳ್ತಂಗಡಿ ಎಸ್. ಡಿ.ಎಂ ಸಭಾ0ಗಣದಲ್ಲಿ ಜರುಗಿತು.
ಕಾಯ೯ಕ್ರಮವನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ , ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾಯ೯ಗಳು ಶಾಸಕ ಹರೀಶ್ ಪೂಂಜ ಅವರು ಮಾಡಿದ್ದು, ಇದನ್ನು ಜನ ಸಾಮಾನ್ಯರ ಮನೆ-ಮನಗಳಿಗೆ ತಲುಪಿಸುವ ಕಾಯ೯ ಮಾಡಬೇಕು ಎಂದು ತಿಳಿಸಿದ್ದರು. ಬೂತು ಮಟ್ಟದ ಕಾಯ೯ಕತ೯ನ ಕಷ್ಟ ಎನು ಎಂಬುದು ಶಾಸಕನಾದವನಿಗೆ ಅರಿವಿರಬೇಕು ಇದಕ್ಕೆ ಪೂರಕವಾಗಿ ಶಾಸಕ ಕೆಲಸ ಮಾಡಬೇಕು ಇದನ್ನು ಬೆಳ್ತಂಗಡಿ ಕ್ಷೇತ್ರದಲ್ಲಿ ಶಾಸಕರು
ಮಾಡುತ್ತಿದ್ದಾರೆ. ಶಾಸಕ ಹರೀಶ್ ಪೂಂಜ ಜಿಲ್ಲೆಗೆ ಪ್ರೇರಣೆಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಹರೀಶ್ ಪೂಂಜ ಪ್ರಸ್ತಾವಿಕವಾಗಿ ಮಾತನಾಡಿ, ತಾಲೂಕಿನ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ಕಾಯ೯ಕ್ರಮ ಪೂರಕವಾಗಿದೆ ಎಂದರು.
ಬಿಜೆಪಿ ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ತಾಲೂಕು ಉಸ್ತುವಾರಿ ಹರಿಕೃಷ್ಣ ಬಂಟ್ವಾಳ್ , ಮಾಜಿ ಶಾಸಕ ಪ್ರಭಾಕರ್ ಬಂಗೇರ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ಉಪಸ್ಥಿತಿ ಇದ್ದರು.
ಇನ್ನೋವ೯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಕಾಯ೯ಕ್ರಮ ನಿರೂಪಿಸಿದರು. ಮಂಡಲ ಬಿಜೆಪಿ ಉಪಾಧ್ಯಕ್ಷ ಸೀತಾರಾಮ ಬೆಳಾಲು ವಂದಿಸಿದರು.