ತಾಲೂಕು ಸುದ್ದಿ

ಬಿಜೆಪಿ ಯುವ ಮೋಚಾ೯: ತಾಲೂಕಿನ 6 ಜನ ಅಶಕ್ತರಿಗೆ ನಿರಂತರ ಉಚಿತ ಔಷಧಿ ವಿತರಣೆ

ಬೆಳ್ತಂಗಡಿ: ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಜನೌಷಾದಿ ಕೇಂದ್ರ ಉಜಿರೆ ಹಾಗೂ ಬೆಳ್ತಂಗಡಿ ಇವರ ಸಹಕಾರದೊಂದಿಗೆ ತಾಲೂಕಿನ 6 ಜನ ಅಶಕ್ತರಿಗೆ ನಿರಂತರ ಉಚಿತ ಔಷದಿ ವಿತರಣಾ ಕಾರ್ಯಕ್ರಮ ಅ.4 ರಂದು ಶ್ರಮಿಕ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ಹರೀಶ್ ಪೂಂಜಾ ,ತಾಲೂಕು ಅಧ್ಯಕ್ಷರಾದ ಯಶವಂತ್ ಗೌಡ ಬೆಳಲು, ಜನೌಷಾದಿ ಮಾಲೀಕರಾದ ರವೀಶ್ ,ಯುವಮೋರ್ಚಾ

ಮಂಡಲ ಪ್ರದಾನ ಕಾರ್ಯದರ್ಶಿಗಳಾದ ಉಮೇಶ್ ಕುಲಾಲ್,ವಿನೀತ್ ಕೋಟ್ಯಾನ್ ಸಾವ್ಯ, ಉಪಾಧ್ಯಕ್ಷ ರಾದ ಪ್ರಮೋದ್ ದಿಡುಪೆ, ಕಾರ್ಯದರ್ಶಿ ಮಂಜುನಾಥ್ ಬೆಳ್ತಂಗಡಿ, ಮಹಾಶಕ್ತಿ ಕೇಂದ್ರಗಳ ಪ್ರಮುಖರಾದ ಸಂಕೇತ್ ಬೆಳ್ತಂಗಡಿ, ಆದರ್ಶ್ ಕುವೆಟ್ಟು, ಪ್ರಶಾಂತ್ ಇಂದಬೆಟ್ಟು, ಉದಯ ನಾವರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೀನಾಕ್ಷಿ ಬೆಳಲು, ಸುಮಿತ್ರ ಬೆಳ್ತಂಗಡಿ, ಗಂಗಯ್ಯ ನಾಯಕ್ ಓಡಿಲ್ನಳ, ಸುಶೀಲಾ ಬೆಳಲು, ಚಂದ್ರಯ್ಯ ಲೈಲಾ, ಜಾನಕಿ ಇಂದಬೆಟ್ಟು ಇವರಿಗೆ *ಜೀವನ ಪರ್ಯಂತ

ಔಷದಿ* ಹಾಗೂ ಓಡಿಲ್ನಳ ಗ್ರಾಮದ ಧರ್ಣಪ್ಪ ಮೂಲ್ಯ ರವರು ಕೊರೊನ ಮಹಾಮಾರಿಗೆ ಗೆ ಬಲಿ ಆಗಿದ್ದು ಅವರಿಗೆ ಗಂಡು ಮಕ್ಕಳಿಲ್ಲದ ಕಾರಣ ಅವರ ಮನೆಯ ಕಾಮಗಾರಿ ಕೆಲಸ ಅರ್ಧದಲ್ಲಿ ನಿಂತು ಹೋಗಿದ್ದು ಅವರ ಮನೆಯ ಮುಂದುವರಿದ ಕಾಮಗಾರಿಗೆ ಇಲೆ ಲ್ಟ್ರಿಕಲ್ ಸಾಮಾಗ್ರಿಗಳನ್ನು ಯುವಮೋರ್ಚಾ ವತಿಯಿಂದ ವಹಿಸಲಾಯಿತು.

 

 

 

ನಿಮ್ಮದೊಂದು ಉತ್ತರ