ತಾಲೂಕು ಸುದ್ದಿ

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿ ಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ

ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಮಹಾತ್ಮಾ ಗಾಂಧೀಜಿ ಯವರ 153ನೇ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರೀ ಯವರ 117ನೇ ಜಯಂತಿಯ ದಿನಾಚರಣೆಯನ್ನು ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ರಾದ ಶೈಲೇಶ್ ಕುಮಾರ್ ಕರ್ತೋಡಿ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ನಂಂತರ ಮಾತನಾಡುತ್ತ ಗಾಂಧೀಜಿ ಯವರ ಆದರ್ಶ ಹಾಗೂ ತತ್ವ ಗಳು ಇಂದಿನ ಪೀಳಿಗೆಗೆ ಅದರ ಅಗತ್ಯತೆ ಬಗ್ಗೆ ಸವಿಸ್ತಾರವಾಗಿ ತಿಳಿ ಹೇಳಿದರು.


ಇದೇ ಸಂದರ್ಭದಲ್ಲಿ ಪಕ್ಷ ದ ಇನ್ನೊರ್ವ ಹಿರಿಯ ಮುಖಂಡ ರಾಜ್ಯ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪುರವರು ಮಾತನಾಡುತ್ತ ಅಹಿಂಸಾ ತತ್ವ ದಲ್ಲಿ ಗಾಂಧೀಜಿ ಇಟ್ಟ ನಂಬಿಕೆಗಳು ಹಾಗೂ ಹೋರಾಟ ದ ಬಗ್ಗೆ ವಿವರಿಸಿದರೆ. ದೇಶ ದ ಎರಡನೇ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರೀ ಯವರು ದೇಶ ಕ್ಕೆ ಕೊಟ್ಟ ಕೊಡುಗೆ, ಆಡಳಿತ ವೈಖರಿ, ಅವರು ಇಟ್ಟ ಸುಭದ್ರ ಅಡಿಪಾಯ ಮುಂದಿನ ಜನಾಂಗ ಪಾಲಿಸುವ ಮೂಲಕ ಸುಭದ್ರ ಭಾರತವನ್ನು ನಿರ್ಮಾಣ ಮಾಡಲು ಸಹಕಾರಿ ಆಗುತ್ತದೆ ಎಂದು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು.
ಇದೇ ಸಂದರ್ಭದಲ್ಲಿ ಮತ್ತೋರ್ವ ಕಾಂಗ್ರೆಸ್ ಹಿರಿಯ ಮುಖಂಡ ರಘ ಧರ್ಮಸೇನಾ ಬೆಳ್ತಂಗಡಿ ಮಾತನಾಡುತ್ತ ದೇಶ ಪ್ರಸಕ್ತ ಎದುರಿಸುತ್ತಿರುವ ಸಮಸ್ಯೆ ಹಾಗೂ ಇಂದಿನ ದಿನದಲ್ಲಿ ಗಾಂಧೀಜಿ ತತ್ವ ಅಗತ್ಯತೆ ಬಗ್ಗೆ ಸವಿಸ್ತಾರವಾಗಿ ಹೇಳಿದರು.ಅಲ್ಲದೇ ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡುವ ಸುಳ್ಳು ಸುದ್ದಿ ಗಳು ಜನರನ್ನು ಹಿಂಸೆ ಗೆ ಪ್ರಚೋದನೆ ನೀಡುತ್ತೆ. ಅವುಗಳನ್ನು ನಿಗ್ರಹಿಸುವ ಅಗತ್ಯ ಅಧಿಕಾರಿ ವರ್ಗ ಮಾಡಬೇಕೆಂದು ಹೇಳಿದರು. ಅಲ್ಲದೇ ಅಹಿಂಸೆ ಯೆ ನಮ್ಮ ಭಾರತೀಯತೆ ಗಾಂಧೀಜಿ ಅದರ ಮೇಲೆ ತಮ್ಮ ನಂಬಿಕೆ ಯನ್ನು ಗಟ್ಟಿಗೊಳಿಸಿದರು ಅಂತ ಹೇಳಿದರು.
ಕಾರ್ಯಕ್ರಮ ದಲ್ಲಿ ನಗರ ಪಂಚಾಯತ್ ಸದಸ್ಯ ಜಗದೀಶ್ ಡಿ, ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ದ ಅಧ್ಯಕ್ಷ ಸಲೀಂ ಗುರುವಾಯನಕೆರೆ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಹಿರಿಯ ಕಾಂಗ್ರೆಸ್ ಮುಖಂಡ ಚಂದು ಎಲ್, ನಗರ ಕಾರ್ಮಿಕ ಘಟಕ ದ ಅಧ್ಯಕ್ಷ ಆರೀಶ್ ಪೆರಿಂಜೆ, ನಗರ ಪಂಚಾಯತ್ ಮಾಜಿ ಸದಸ್ಯ ಮೆಹಬೂಬ್, ಬೆಳ್ತಂಗಡಿ ನಗರ ಪಂಚಾಯತ್ ಹಾಲಿ ಸದಸ್ಯೆ ಮುಸ್ತಾಕ್ ಜಾನ್, ಬೆಳ್ತಂಗಡಿ ನಗರ ಪಂಚಾಯತ್ ಹಾಲಿ ಸದಸ್ಯ ಜನಾರ್ದನ್ ಕುಲಾಲ್,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಕಾಂಗ್ರೆಸ್ ಹಿಂದುಳಿದ ವರ್ಗದ ನಗರ ಅಧ್ಯಕ್ಷ ಸುಭಿತ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್ ಕಮಿಟಿ ಯ ಸದಸ್ಯ ಪ್ರಭಾಕರ್ ಶಾಂತಿಗೋಡಿ, ಕಾಂಗ್ರೆಸ್ ಎಸ್. ಸಿ ಘಟಕ ದ ಗ್ರಾಮೀಣ ಅಧ್ಯಕ್ಷ ರವಿ ಇಂದಬೆಟ್ಟು, ಜೆರಾಲ್ಡ್ ಕೊರಯ ಮೊಡOತಿಯಾರು, ಸೌಮ್ಯ ಲಾಯಿಲ, ಮೊಹಮ್ಮದ್ ಆಲಿ ಲಾಯಿಲ, ಕಾಂಗ್ರೆಸ್ ಪಕ್ಷ ದ ಮುಖಂಡ ನಾರಾಯಣ ಪೂಜಾರಿ, ಹೈದರ್ ಆಲಿ ಕೊಲ್ಪೆದ ಬೈಲು, ನವೀನ್ ಕರಂಬಾರು, ಅವಿನಾಶ್ ಮೇಗಿನ ಕರ್ತೋಡಿ ಹಾಗೂ ಇನ್ನಿತರು ಉಪಸ್ಥಿತರಿದ್ದರು*.ಕಾರ್ಯಕ್ರಮ ದ ಕೊನೆಯಲ್ಲಿ ಗಾಂಧೀಜಿ ವಿಚಾರ ಧಾರೆ ಯ ಬಗ್ಗೆ ಚಿಂತನ ಮಂತನ ನಡೆಯಿತು. ನಗರ ಪಂಚಾಯತ್ ಸದಸ್ಯ ಜಗದೀಶ್ ಡಿ .ಸ್ವಾಗತಿಸಿ, ವಂದಿಸಿದರು.

ನಿಮ್ಮದೊಂದು ಉತ್ತರ