ಬೆಳ್ತಂಗಡಿ: ಬೆಳ್ತಂಗಡಿ ಮಂಡಲ ಬಿಜೆಪಿ ಕಛೇರಿಯಲ್ಲಿ ಪಂಡಿತ್ ಧೀನ್ ದಯಾಳ್ ಉಪಾಧ್ಯಾಯ ಇವರ ಜನ್ಮದಿನಾಚರಣೆ ಆಚರಿಸಲಾಯಿತು. ಪಂಡಿತ್ ಧೀನ್ ದಯಾಳ್ ಉಪಾಧ್ಯಾಯರ ತತ್ವ ಮತ್ತು ಆದರ್ಶಗಳು ಸಾರ್ವಕಾಲಿಕ ಮತ್ತು ಸದಾ ಅನುಸರಣೀಯ ಎಂದು ಶಾಾಸ ಹರೀಶ್ ಪೂಂಜ ಹೇಳಿದರು.
ಕಾರ್ಯಕ್ರಮದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತರಾಗಿ ಪಕ್ಷದ ಬೆಳವಣಿಗೆಗೆ ಆರಂಭದ ದಿನಗಳಲ್ಲಿ ಶ್ರಮಿಸಿ ಪ್ರಸ್ತುತ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿರುವ ,ಮಾರ್ಗದರ್ಶಕರಾಗಿರುವ ಶ್ರೀ ಪ್ರತಾಪ್ ಸಿಂಹ ನಾಯಕ್ ರವರಿಗೆ ಶಾಸಕರಾದ ಶ್ರೀ ಹರೀಶ್ ಪೂಂಜ ಹಾಗೂ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್ ಗೌರವಾ೯ಪಣೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀನಿವಾಸ್ ರಾವ್ ಧರ್ಮಸ್ಥಳ, ಗಣೇಶ್ ಗೌಡ ಉಪಾಧ್ಯಕ್ಷರಾದ ಸೀತಾರಾಮ್ ಬೆಳಾಲು ಜಿಲ್ಲಾ ಭಾಜಪ ಉಪಾಧ್ಯಕ್ಷರಾದ ಕೊರಗಪ್ಪ ನಾಯ್ಕ್ ಜಿಲ್ಲಾ ST ಮೋರ್ಚಾ ಅಧ್ಯಕ್ಷರಾದ ಚೆನ್ನಕೇಶವ,ಮಂಡಲ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ವಿಜಯ ಆರಂಬೋಡಿ ಪ್ರಧಾನ ಕಾರ್ಯದರ್ಶಿ ಸವಿತಾ ಶೆಟ್ಟಿ ಮಂಡಲ ಉಪಾಧ್ಯಕ್ಷರಾದ ವಸಂತಿ ಮಚ್ಚಿನ ನಾರಾವಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮೋಹನ್ ಅಂಡಿಂಜೆ ಹಿಂದುಳಿದ ಮೋರ್ಚಾ ಅಧ್ಯಕ್ಷರಾದ ಪ್ರಭಾಕರ್ ಆಚಾರ್ಯ ಉಪಸ್ಥಿತರಿದ್ದರು.