ಬೆಳ್ತಂಗಡಿ: ಕರ್ನಾಟಕ ಸರಕಾರ ಕಾರ್ಮಿಕ ಇಲಾಖೆ ದ. ಕ. ಜಿಲ್ಲೆ, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಇದರ ಆಶ್ರಯದಲ್ಲಿ ಕೊವೀಡ್-19 ಲಾಕ್ ಡೌನ್ ಸಮಸ್ಯೆಯಿಂದಾಗಿ ಸಂಕಷ್ಟಕ್ಕೀಡಾದ ಬೆಳ್ತಂಗಡಿ ತಾಲೂಕಿನ ಕುಂಬಾರ ಸಮುದಾಯದ ಅಸಂಘಟಿತ ಕುಂಬಾರಿಕೆ ಕೆಲಸ ಮಾಡುವ ಮತ್ತು ಮಾರಾಟ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆಯ ಕಾಯ೯ಕ್ರಮ ಸೆ.12 ರಂದು ಶ್ರಮಿಕ ಶಾಸಕರ ಕಚೇರಿಯಲ್ಲಿ ಜರುಗಿತು.
ಬೆಳ್ತಂಗಡಿ ತಾಲೂಕಿನ ಜನಪ್ರಿಯ ಯುವ ನಾಯಕ ಶಾಸಕರಾದ ಹರೀಶ್ ಪೂಂಜಾ
ಆಹಾರ ಕಿಟ್ ವಿತರಣೆಯನ್ನು ನೇರವೇರಿಸಿ, ಕುಂಬಾರ, ಕುಲಾಲ ಸಮಾಜದ ಅಭಿವೃದ್ಧಿಗೆ ತನ್ನ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷರಾದ ಹರೀಶ್ ಕಾರಿಂಜ ವಹಿಸಿ, ಕುಂಬಾರ ಸಮಾಜದ 90 ಮಂದಿಗೆ ಆಹಾರ ಕಿಟ್ ವಿತರಣೆ ಶಾಸಕರ ಸಹಕಾರದಲ್ಲಿ ಮಾಡಲಾಡಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಪದ್ಮಕುಮಾರ್ ನಿರ್ದೇಶಕರು, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ,ಬೆಳ್ತಂಗಡಿ ತಾಲೂಕು ಕಾಮಿ೯ಕ ನಿರೀಕ್ಷಕ ಹರೀಶ್, ಜಯರಾಜ್ ಸಾಲಿಯಾನ್ ರಾಜ್ಯ ಕಾರ್ಯದರ್ಶಿ ಭಾರತೀಯ ಮಜ್ದೂರ್ ಸಂಘ ಕರ್ನಾಟಕ, ಹೆಚ್ .ಭಾಗವಹಿಸಿದ್ದರು.
ಕಾಯ೯ಕ್ರಮದಲ್ಲಿ ಸಾಂಕೇತಿಕವಾಗಿ ಲೋಕೇಶ್ ಕುಲಾಲ್ ಕರಾಯ, ನಾವೂರು ಗ್ರಾಮದ ನಿವಾಸಿಗಳಾದ ಉಮಣ ಕುಂಬಾರ, ಗಂಗಯ್ಯ ಕುಂಬಾರ, ಲೋಕಯ್ಯ ಕುಂಬಾರ, ಕೊರಗಪ್ಪ ಕುಂಬಾರ, ಸಂಜೀವ ಕುಂಬಾರ, ಗೋಪಾಲ ಕುಂಬಾರ ಇವರಿಗೆ ಶಾಸಕರು ಕಿಟ್ ವಿತರಿಸಿದರು.
ಉಳಿದ ಕುಂಬಾರಿಕೆ ಮಾಡುವ ಸಮುದಾಯ
ದವರಿಗೆ ಕಿಟ್ ವಿತರಣೆ ಮಾಡುವ ಕಾಯ೯ಕ್ರಮ ಬುಧವಾರ ಕುಲಾಲ ಮಂದಿರ ಗುರುವಾಯನಕೆರೆಯಲ್ಲಿ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಈ ಸಂದರ್ಭದಲ್ಲಿ ತಿಳಿಸಿದರು.