ತಾಲೂಕು ಸುದ್ದಿ

ಬಿ.ಜೆ.ಪಿ ಬೆಳ್ತಂಗಡಿ ಮಂಡಲ ಫಲಾನುಭವಿಗಳ ಪ್ರಕೋಷ್ಠದ ಸಭೆ

ಬೆಳ್ತಂಗಡಿ : ಬಿಜೆಪಿ ಬೆಳ್ತಂಗಡಿ ಮಂಡಲದ ಫಲಾನುಭವಿಗಳ ಪ್ರಕೋಷ್ಠದ ಸಭೆಯು ಬಿಜೆಪಿ ಕಛೇರಿಯಲ್ಲಿ ಆ. 23 ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಮಂಡಲದ ಅಧ್ಯಕ್ಷರಾದ ಜಯಂತ ಕೋಟ್ಯಾನ್‌ರವರು ವಹಿಸಿದರು. ಜಿಲ್ಲಾ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕರಾದ ಗೋಕುಲ್ ದಾಸ್ ಶೆಟ್ಟಿಯವರು ಭಾಗವಹಿಸಿ ಪ್ರಕೋಷ್ಠದ ಉದ್ಧೇಶದ ಬಗ್ಗೆ ಮಾಹಿತಿ ನೀಡಿದರು.ಜಿಲ್ಲಾ ಸಮಿತಿಯ ಸದಸ್ಯರಾದ ಜಿ.ನಾರಾಯಣ ಆಚಾರ್ ಸ್ವಾಗತಿಸಿ ಮಂಡಲ ಸಮಿತಿ ಸಂಚಾಲಕರಾದ ವೆಂಕಟೇಶ್ ಭಟ್ ಮುಂಡಾಜೆ ಧನ್ಯವಾದ ಸಲ್ಲಿಸಿದರು. ಸಭೆಯಲ್ಲಿ ಮಂಡಲ ಸಹ ಸಂಚಾಲಕರಾದ ಗಣೇಶ್ ಗೌಡ ಇಂದಬೆಟ್ಟು.ಸದಸ್ಯರಾದ ಶ್ರೀಮತಿ ಶಶಿಕಲಾ ಕೊಯ್ಯೂರು, ಭದ್ರಯ್ಯ ಗೌಡ ನಿಡ್ಲೆ, ಭುಜಂಗ ಶೆಟ್ಟಿ ಬೆಳ್ತಂಗಡಿ. ಗಣೇಶ್ ಭಂಡಾರಿ ಸವಣಾಲು, ಲಿಂಗಪ್ಪ ನಾಯ್ಕ ಉರುವಾಲು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ