ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ವಿತರಿಸಿ ಮಾತನಾಡಿ, ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ವಿವಿಧ ಇಲಾಖೆಗಳ ಮೂಲಕ 75 ಯೋಜನೆಗಳನ್ನು ಒಂದು ವರ್ಷದ ಅವಧಿಯಲ್ಲಿ ಅನುಷ್ಠಾನ ಮಾಡಲಾಗುವುದು. ಇದರಿಂದಾಗಿ ತಾಲೂಕಿನ 5600 ಮಂದಿ ಫಲಾನುಭವಿಗಳಿಗೆ ಸರಕಾರದ ಯೋಜನೆ ನೇರವಾಗಿ ತಲುಪಲಿದೆ. ಪ್ರಥಮ ಕಾರ್ಯಕ್ರಮವಾಗಿ ಆ.15 ರಂದು ಪಶುಸಂಗೋಪನಾ ಇಲಾಖೆಯ ಮೂಲಕ 75 ಮಂದಿಗೆ ಗೋವಿನ ಕರು ದಾನ ಕಾರ್ಯಕ್ರಮ ನಡೆಸಲಾಗಿದೆ. ಇವತ್ತು ಎರಡನೇ ಕಾರ್ಯಕ್ರಮವಾಗಿ 75 ಮಂದಿಗೆ 94ಸಿ ಹಕ್ಕು ಪತ್ರ ವಿತಸಲಾಗುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ತಾ.ಪಂ ಮಾಜಿ ಸದಸ್ಯೆ ವಸಂತಿ ಲಕ್ಷಣ್ ಮಚ್ಚಿನ, ಪುದುವೆಟ್ಟು ಗ್ರಾ.ಪಂ ಅಧ್ಯಕ್ಷ ಯಶವಂತ ಗೌಡ, ಮಿತ್ತಬಾಗಿಲು ಗ್ರಾ.ಪಂ ಉಪಾಧ್ಯಕ್ಷ ವಿನಯಚಂದ್ರ ಗೌಡ, ಕೊಯ್ಯರು, ನಿಡ್ಲೆ ಕಳೆಂಜ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಉಪಸ್ಥಿತರಿದ್ದರು.ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕ ಪಾವಡಪ್ಪಸ್ವಾಗತಿಸಿದರು. ಕಂದಾಯ ಇಲಾಖೆಯ ಅಧಿಕಾರಿಗಳು
ಉಪಸ್ಥಿತರಿದ್ದರು.