ತಾಲೂಕು ಸುದ್ದಿ

ರೂ.25 ಲಕ್ಷ ವೆಚ್ಚದಲ್ಲಿ 250 ಆಶಾ ಕಾಯ೯ಕತೆ೯ಯರಿಗೆ ಮೊಬೈಲ್ ವಿತರಣೆ

 

ಬೆಳ್ತಂಗಡಿ: ಕೋವಿಡ್,19 ಸಂಕಷ್ಟದ ಸಂದರ್ಭದಲ್ಲಿ ಅವಿರತವಾಗಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಕಾಯ೯ನಿವ೯ಹಿಸಿದ ಬೆಳ್ತಂಗಡಿ ತಾಲೂಕಿನ 250 ಆಶಾ ಕಾಯ೯ಕತೆ೯ಯರಿಗೆ ‘ಶ್ರಮಿಕ ಸೇವಾ ಟ್ರಸ್ಟ್ ‘ ಮುಖಾಂತರ ರೂ.25 ಲಕ್ಷ ವೆಚ್ಚದ “ಮೊಬೈಲ್ ವಿತರಣೆ ” ಕಾಯ೯ಕ್ರಮ ಆ.14ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಜರುಗಿತು.
ರಾಜ್ಯ ಸರಕಾರದ ಕಾಮಿ೯ಕ ಸಚಿವ ಶಿವರಾಮ ಹೆಬ್ಬಾರ್ ಆಶಾ ಕಾಯ೯ಕತೆ೯


ಯರಿಗೆ ಮೊಬೈಲ್ ವಿತರಿಸಿ ಮಾತನಾಡಿ , ಕೊರೊನಾ ಸಂದರ್ಭದಲ್ಲಿ ಆಶಾ ಕಾಯ೯ಕತ೯ಯರು ಸಮಾಜದ ಆರೋಗ್ಯಕ್ಕಾಗಿ ಸಮಾಪ೯ಣಾ ಭಾವದಿಂದ ದುಡಿದಿದ್ದು, ಅವರ ಸೇವೆ ಶ್ಲಾಘನೀಯ ಎಂದರು. ರಾಜ್ಯದಲ್ಲಿ ಈಗಾಗಲೇ 22 ಲಕ್ಷ ಕುಟುಂಬಗಳಿಗೆ ಕಾಮಿ೯ಕ ಇಲಾಖೆಯಿಂದ ಆಹಾರ ಕಿಟ್ ವಿತರಣೆ

ಮಾಡಲಾಗಿದ್ದು, ರಿಕ್ಷಾ ಸೇರಿದಂತೆ ವಿವಿಧ ವಾಹನಗಳ ಚಾಲಕರು, ಕಾಮಿ೯ಕರು, ಹೊರ ಗುತ್ತಿಗೆ ನೌಕರರ ಬ ದುಕಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಮುಂದಿನ ಅಧಿವೇಶನದಲ್ಲಿ ವಿಶೇಷ ಕಾನೂನು ಮಂಡಿಸಲಾಗುವುದು ಎಂದು ಹೇಳಿದರು.
ಸಮಾರಂಭವನ್ನು ಉದ್ದೇಶಿಸಿ ಪ್ರಸ್ತಾವಿಕವಾಗಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು ಕೊರೊನಾ ಒಂದು ಮತ್ತು ಎರಡನೇ ಅಲೆಯ ಅವಧಿಯಲ್ಲಿ ಆಶಾಕಾಯ೯ಕತೆ೯ಯರು

ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅವರಲ್ಲಿ ಇರುವ ಒಂದು ಮೊಬೈಲ್ ಮಕ್ಕಳ ಆನ್ ಲೈನ್ ಬಳಕೆಗೆ ಮತ್ತು ಇಲಾಖಾ ಕೆಲಸ ಸಮಸ್ಯೆ ಯಾಗಿರುವುದರಿಂದ ಈ ಮೊಬೈಲ್ ನೀಡಲಾಗಿದೆ ಎಂದು ತಿಳಿಸಿದರು.
ಎಂ.ಎಲ್. ಸಿ ಪ್ರತಾಪಸಿಂಹ ನಾಯಕ್ ಮಾತನಾಡಿ ಶುಭ ಹಾ ರೈಸಿದರು. ಈ ಸಂದರ್ಭದಲ್ಲಿ ಸಚಿವರು ಕಾಮಿ೯ಕರಿಗೆ ಆಹಾರ ಕಿಟ್ ವಿತರಿಸಿದರು.
ವೇದಿಕೆಯಲ್ಲಿ ಬಿಜೆಪಿಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ , ಉಪಾಧ್ಯಕ್ಷ ರವಿ ಬರಮೇಲು, ಬದುಕು ಕಟ್ಟೋಣ ತಂಡದ ಮೋಹನ್, ರಾಜೇಶ್ ಪೈ, ತಾಲೂಕು ವೈದ್ಯಾಧಿಕಾರಿ ಡಾ. ಕಲಾಮಧು, ಶ್ರೀ ಮತಿ ವನಜಾಕ್ಷಿ ಹೆಬ್ಬಾರ್, ಆಶಾ ಕಾಯ೯ಕತೆ೯
ಯರ ಮೇಲ್ವಿಚಾರಕಿ ಹರಿಣಿ, ಬಿ.ಎಂ.ಎಸ್ ರಾಜ್ಯ ಕಾರ್ಯದರ್ಶಿ ಜಯರಾಜ ಸಾಲ್ಯಾನ್ ಉಪಸ್ಥಿತರಿದ್ದರು.
ಶ್ರೀ ಮತಿ ಶ್ಯಾಮಲಾ ಉಜಿರೆ ಇವರು ಪ್ರಾಥ೯ನೆ ಹಾಡಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ನಿವಾಸ ರಾವ್ ಕಾಯ೯ಕ್ರಮ ನಿರೂಪಿಸಿದರು.

ನಿಮ್ಮದೊಂದು ಉತ್ತರ