ಜಿಲ್ಲಾ ವಾರ್ತೆತಾಲೂಕು ಸುದ್ದಿ

ಕೊಕ್ಕಡ ಸೌತಡ್ಕ ಹಿಂದೂ ಮುಖಂಡನ ಮನೆ ದರೋಡೆ ಪ್ರಕರಣ : ಆರೋಪಿಗಳಿಬ್ಬರ ಬಂಧನ

ಕೊಕ್ಕಡ : ಹಿಂದೂ ಸಂಘಟನೆಯ
ಮುಖಂಡ ಉದ್ಯಮಿ ಸೌತಡ್ಕ ಸಮೀಪದ ನೂಜಿ ತುಕ್ರಪ್ಪ ಶೆಟ್ಟಿಯವರ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಪ್ರಮುಖ ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಯ ವಿಶೇಷ ಅಪರಾಧ ಪತ್ತೆ ತಂಡ ಬಂಧಿಸಿರುವುದಾಗಿ ವರದಿಯಾಗಿದೆ.


ಕೊಕ್ಕಡದಲ್ಲಿ ಸೌತಡ್ಕ ದೇವಸ್ಥಾನದ ಸಮೀಪ ಇರುವ ತುಕ್ರಪ್ಪ ಶೆಟ್ಟಿಯವರ ಮನೆಯಲ್ಲಿ ಕಳೆದ ಡಿ. 21ರಂದು ರಾತ್ರಿ ದರೋಡೆ ನಡೆದಿತ್ತು
ಕಡಬ ತಾಲೂಕು ಇಚ್ಲಾಂಪಾಡಿ ನಿವಾಸಿ, ಪ್ರಸ್ತುತ ನೆಲ್ಯಾಡಿಯ ಹೊಸಮಜಲು ಎಂಬಲ್ಲಿ ವಾಸವಾಗಿರುವ ಚಂದ್ರಶೇಖರ ಶೆಟ್ಟಿ (50) ಹಾಗೂ ಸುರತ್ಕಲ್ ಸೂರಿಂಜೆ ನಿವಾಸಿ ದಾವೂದ್ ಹಕೀಂ (36) ಬಂಧಿತ ಆರೋಪಿಗಳು, ನೆಲ್ಯಾಡಿಯಹೊಸಮಜಲಿನಬಾಡಿಗೆಮನೆಯೊಂದರಲ್ಲಿ ಚಂದ್ರಶೇಖರ ಶೆಟ್ಟಿ ವಾಸವಾಗಿದ್ದು, ರಿಕ್ಷಾ ಚಾಲಕನಾಗಿದ್ದರು. ಚಂದ್ರಶೇಖರ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ನಡೆಸುತ್ತಿದ್ದೂ ಈತ ತುಕ್ರಪ್ಪ ಶೆಟ್ಟಿಯವರ ಪತ್ನಿಗೆ ದೂರ ಸಂಬಂಧಿಕನೂ ಆಗಿದ್ದಾರೆ.ತುಕ್ರಪ್ಪ
ಶೆಟ್ಟಿಯವರು ದರೋಡೆ ನಡೆಯುವ ಸ್ವಲ್ಪ ಸಮಯದ ಮುಂಚೆ ಶಿಶಿಲದಲ್ಲಿದ್ದ ತಮ್ಮ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದರು. ರಿಯ
ಲ್ ಎಸ್ಟೇಟ್ ವ್ಯವಹಾರ ನಡೆಸುವ ಚಂದ್ರಶೇಖರ್ ಗೆ ಇದು ತಿಳಿದಿತ್ತು . ಅಲ್ಲದೇ ಜಾಗ ಮಾರಾಟವಾದ ವಿಚಾರವನ್ನು ಖುದ್ದು ತುಕ್ರಪ್ಪ ಶೆಟ್ಟಿಯವರೇ ಆರೋಪಿ ಬಳಿ ತಿಳಿಸಿದ್ದರು. ಹೀಗಾಗಿ ಮನೆಯಲ್ಲಿ ಭಾರೀ ಮೊತ್ತದ ಹಣ ಇರಬಹುದು ಎಂದು ಲೆಕ್ಕಾಚಾರ ಹಾಕಿದ ಚಂದ್ರಶೇಖರ ಶೆಟ್ಟಿ ಈ ಮಾಹಿತಿಯನ್ನೂ ತನ್ನ ಸ್ನೇಹಿತ ಬಶೀರ್ ಎಂಬಾತನಿಗೆ ತಿಳಿಸಿದ್ದಾನೆ. ಬಷೀರ್ ಈ ಪ್ರಕರಣದಲ್ಲಿ ಬಂಧಿತನಾಗಿ ಇದೀಗ ಜಾಮೀನಿನ ಮೇಲೆ ಬಿಡುಗಡೆ ಹೊಂದಿ
ದ್ದಾನೆ . ಬಶೀರ್ ಸುರತ್ಕಲ್‌ನ ದಾವೂದ್ ಹಕೀಂ ಎಂಬಾತನಿಗೆ ತಿಳಿಸಿ ದರೋಡೆ ನಡೆಸುವ ಸಂಚು ರೂಪಿಸಿದ್ದ. ಚಂದ್ರ ಶೇಖರ್ ದರೋಡೆ ನಡೆಸಿದ ತಂಡಕ್ಕೆ ತುಕ್ರಪ್ಪ ಶೆಟ್ಟಿಯವರ ಮನೆಯ ಇಂಚಿಂಚು ಮಾಹಿತಿ ನೀಡಿದ್ದ ಎಂದು ಹೇಳಲಾಗುತ್ತಿದೆ.ತನಿಖೆ ಮುಂದುವರೆದಿದೆ.

 

ನಿಮ್ಮದೊಂದು ಉತ್ತರ