ತಾಲೂಕು ಸುದ್ದಿ

ವಿದ್ಯುತ್ ವಿತರಣಾ ಕಂಪನಿ ಖಾಸಗೀಕರಣ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ

ನಾಳೆ ಯಾವುದೇ ಸಮಸ್ಯೆಯಾದರೂ ಸ್ಪಂದಿಸದೇ ಇರಲು ಸಿಬ್ಬಂದಿ ನಿರ್ಧಾರ

ಬೆಳಗ್ಗೆ 8:30 ರಿಂದ ಸಂಜೆ 5:30ರವರೆಗೆ
ಬೆಳ್ತಂಗಡಿಯಲ್ಲೂ ಪ್ರತಿಭಟನೆ


ಬೆಳ್ತಂಗಡಿ: ಕೇಂದ್ರ ಸರ್ಕಾರ ರೂಪಿಸಿರುವ 2021ರ ಕೇಂದ್ರ ವಿದ್ಯುತ್ ತಿದ್ದುಪಡಿ ಮಸೂದೆ ವಿರೋಧಿಸಿ ಆ.10ರಂದು ನಾಳೆ ದೇಶದ್ಯಾಂತ ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಎರಡೂ ವಿಭಾಗಗಳಾದ ಬೆಳ್ತಂಗಡಿ ಮತ್ತು ಉಜಿರೆಯಲ್ಲಿ ಪ್ರತಿಭಟನೆ ಬೆಳಿಗ್ಗೆ 8:30 ರಿಂದ ಸಂಜೆ 5:30ರವರೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಆದ್ದರಿಂದ ನಾಳೆ ವಿದ್ಯುತ್ ಸಮಸ್ಯೆ ಆದಲ್ಲಿ ಸರ್ಕಾರವೇ ನೇರ ಹೊಣೆ ಎಂಬ ಸಂದೇಶವನ್ನೂ ಈಗಾಗಲೇ ಮೆಸ್ಕಾಂ ಸಿಬ್ಬಂದಿಗಳು ನೀಡಿದ್ದು, ಯಾವುದೇ ಸಮಸ್ಯೆಯಾದರೂ ಸ್ಪಂದಿಸದೇ ಇರಲು ನಿರ್ಣಯಿಸಿದ್ದಾರೆ ಎಂಬ ಮಾಹಿತಿ ಯನ್ನೂ ನೀಡಿದ್ದಾರೆ. ಮೆಸ್ಕಾಂ ಸಿಬ್ಬಂದಿಗಳ ಪ್ರತಿಭಟನೆಯಿಂದ ತಾಲೂಕಿನಲ್ಲಿಯೂ ನಾಳೆ        ವಿದ್ಯುತ್ ವ್ಯತ್ಯಯ ಆಗುವ ಸಾಧ್ಯತೆಯಿದ್ದು,        ಸಾರ್ವಜನಿಕರಿಗೆ ಸ್ವಲ್ಪ ತೊಂದರೆಯಾಗಲಿದೆ.

ನಿಮ್ಮದೊಂದು ಉತ್ತರ