ಬೆಳ್ತಂಗಡಿ: ಜು. 25 ರಂದು ಕರ್ನಾಟಕ ಜೈನ್ ಸ್ವಯಂಸೇವಾ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಕರ್ನಾಟಕ ಜೈನ್ ಸ್ವಯಂಸೇವಾ ಸಂಘವನ್ನು ಬೆಳ್ತಂಗಡಿಯ ಶ್ರೀ ಮಂಜುನಾಥ ಕಲಾಭವನದಲ್ಲಿ ರಚಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೋಟರಿ ನ್ಯಾಯವಾದಿಗಳಾದ ಶಶಿಕಿರಣ್ ಜೈನ್ ಅವರು ನೆರವೇರಿಸಿ, “ಕರ್ನಾಟಕಜೈನ್ ಸ್ವಯಂ ಸೇವಾ
ಸಂಘಗಳು ರಾಜ್ಯದಾದ್ಯಂತ ಹೆಮ್ಮರವಾಗಿ ನಿಂತಿದೆ” ಈ ಸಂಘಗಳು ಜೈನ ಸಮುದಾಯಕ್ಕೆ ಮಾದರಿಯಾಗಿದೆ. ನಾನು ಈ ಟ್ರಸ್ಟ್ನಲ್ಲಿ ಟ್ರಸ್ಟಿಯಾಗಿರುವುದು ಸಂತಸದ ವಿಷಯವಾಗಿದೆ. ಟ್ರಸ್ಟಿನ ಅಧ್ಯಕ್ಷರಿಗೆ ನನ್ನ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟ್ ನ ಅಧ್ಯಕ್ಷರಾದ ನೇಮಿರಾಜ ಆರಿಗ ಅವರು ಮಾತನಾಡಿ “ಸುಮಾರು 10 ವರ್ಷ
ದಿಂದ ಸ್ವಯಂಸೇವಕರ ಸಂಘಟನೆ ಹಾಗೂ ಮಹಿಳಾ ಸ್ವಸಹಾಯ ಸಂಘವನ್ನು ಪ್ರಾರಂಭಿಸಿ ಯಶಸ್ವಿಯಾಗಿದ್ದು, ಇದೀಗ ರಾಜ್ಯದಾದ್ಯಂತ ಯುವ ಸಂಘಟನೆಯನ್ನು ಮಾಡುವುದಾಗಿ
ತಿಳಿಸಿ, ಅದರ ಬಗ್ಗೆ ಮಾಹಿತಿ ನೀಡಿದರು.ಮುಖ್ಯ ಅತಿಥಿಗಳಾಗಿ ದಾನಿಗಳು ಹಾಗೂ ಟ್ರಸ್ಟಿಗಳಾದ ಶಮಂತ್ ಕುಮಾರ್ ಜೈನ್ ಬೆಳ್ತಂಗಡಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೂಡಬಿದ್ರೆ ವಿಧಾನ
ಸಭಾ ಕ್ಷೇತ್ರದ ಸಂಚಾಲಕರಾದ ಸುದೀಪ್ ಜೈನ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಂಚಾಲಕರಾದ ವೃಷಭ ಇಂದ್ರ, ಕಾರ್ಕಳ ವಿಧಾನಸಭಾ ಕ್ಷೇತ್ರದ ಸಂಚಾಲಕರಾದ ಮಹೇಶ್ ಜೈನ್, ಕಾರ್ಕಳ ವಿಧಾನಸಭಾ ಕ್ಷೇತ್ರದ ಸಲಹಾ ಸಮಿತಿಯ ಅಧ್ಯಕ್ಷರಾದ ಕಿರಣಕುಮಾರಿ, ಚೆನೈ ತೋಡಿ ಗ್ರಾಮಪಂಚಾಯತ್‌ನ ಸಮೃದ್ಧಿ ಸಂಜೀವಿನಿ ಗ್ರಾಮ ಒಕ್ಕೂಟದ ಅಧ್ಯಕ್ಷರಾದ ಆಕರ್ಷಿಣಿ, ಅರುಣ್ ಕುಮಾರ್ ಜೈನ್ ರೆಂಜಾಳ, ನಿರ್ಮಲ್ ಕುಮಾರ್ ಜೈನ್ ಬಂಗಾಡಿ, ಸಿದ್ಧಾರ್ಥ್ ಕುಮಾರ್ ಅಳದಂಗಡಿ, ಯುವರಾಜ್ ಜೈನ್ ಅಳದಂ
ಗಡಿ ಮತ್ತಿತರರು ಉಪಸ್ಥಿತರಿದ್ದರು.
ಹೇಮಾಜೈನ್ ಹಾಗೂ ಮಮತಾ ಜೈನ್ ಪ್ರಾರ್ಥಿ
ಸಿದರು. ಸಂಘದ ದ.ಕ ಜಿಲ್ಲಾ ಸಂಚಾಲಕರಾದ ಪಿ. ವೃಷಭ ಆರಿಗರವರು ಸ್ವಾಗತಿಸಿ, ಪ್ರಸ್ತಾವನೆ ಗೈದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸಂಚಾಲಕರಾದ ರವೀಶ್ ಜೈನ್ ಕಾರ್ಯಕ್ರ
ಮವನ್ನು ನಿರೂಪಿಸಿದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸಲಹಾ ಸಮಿತಿಯ ಅಧ್ಯಕ್ಷರಾದ ಆಶಾಲತಾ ವಂದಿಸಿದರು