ತಾಲೂಕು ಸುದ್ದಿ

ಮಾಜಿ ಶಾಸಕ ವಸಂತ ಬಂಗೇರರನ್ನು ನೆನಪಿಸಿಕೊಂಡ ಯಡಿಯೂರಪ್ಪ

ಬೆಳ್ತಂಗಡಿ : ಬಿಜೆಪಿ ಸರಕಾರದ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಮಾತನಾಡಿದ.ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಆರಂಭದ ದಿನಗಳಲ್ಲಿ ಬಿಜೆಪಿಯಲ್ಲಿ ಎರಡು ಶಾಸಕರು ಮಾತ್ರ ಇದ್ದರು. ಒಂದು ನಾನು ಇನ್ನೊಂದು ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ ವಸಂತ ಬಂಗೇರ ಎಂದು ಹೇಳಿದ ಬಿಎಸ್ ಯಡಿಯೂರಪ್ಪ ಆ ಮೂಲಕ ತನ್ನ ಪ್ರಥಮ ಶಾಸಕ ವಸಂತ ಬಂಗೇರ ಅವರನ್ನು ಸ್ಮರಿಸಿದರು.

ಬಿಜೆಪಿಯಿಂದ ವಿಧಾನಸಭೆಯಲ್ಲಿ ಆಯ್ಕೆಯಾದ ಪ್ರಥಮ ಶಾಸಕರು ಗಳಲ್ಲಿ ವಸಂತ ಬಂಗೇರ ಮತ್ತು ಬಿಎಸ್ ಯಡಿಯೂರಪ್ಪ ಪ್ರಥಮರು ಎಂಬುದು ಇಲ್ಲಿ ಉಲ್ಲೇಖಾರ್ಹ.

ನಿಮ್ಮದೊಂದು ಉತ್ತರ