ತಾಲೂಕು ಸುದ್ದಿ

ಶಾಸಕ ಹರೀಶ್ ಪೂಂಜ ಹೆಸರಲ್ಲಿ ನಕಲಿ ಫೇಸ್ಟುಕ್

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ಹೆಸರಿನ ಫೇಸ್ ಬುಕ್ ನಕಲಿ ಖಾತೆಯನ್ನು ಯಾರೋ ಕಿಡಿಗೇಡಿಗಳು ತೆರೆದಿದ್ದು ಈ ಮೂಲಕ ಹಣದ ಬೇಡಿಕೆಯನ್ನು ಇಡುತಿದ್ದಾರೆ. ಎಂಬ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ಶಾಸಕ

ಹರೀಶ್ ಪೂಂಜ ಪ್ರತಿಕ್ರಿಯೆ ನೀಡಿ ಯಾರೋ ಕಿಡಿಗೇಡಿಗಳು ಈ ನಕಲಿ ಪೇಸ್ಟುಕ್ ಸೃಷ್ಟಿಸಿರುತ್ತಾರೆ ಇದೊಂದು ವಂಚನೆಯ ಜಾಲವಾಗಿದ್ದು ಯಾರೂ ಕೂಡ ಈ ಖಾತೆಯಿಂದ ಬರುವ ವಿನಂತಿಗಳನ್ನು ಮತ್ತು ಹಣದ ಬೇಡಿಕೆಯ ಸಂದೇಶವನ್ನು ಸ್ವೀಕರಿಸದೇ ನಿರ್ಲಕ್ಷಿಸಬೇಕಾಗಿ ಹಾಗೂ ಎಲ್ಲರೂ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬ ಮನವಿಯನ್ನು ಸಾರ್ವಜನಿಕರಲ್ಲಿ ಮಾಡಿದ್ದಾರೆ

ನಿಮ್ಮದೊಂದು ಉತ್ತರ