ಬೆಳ್ತಂಗಡಿ: ಬೆಳ್ತಂಗಡಿ ಕಾಂಗ್ರೆಸ್ ಪಕ್ಷ ದಲ್ಲಿ ನಡೆದ ದಿಡೀರ್ ರಾಜಕೀಯ ಬೆಳವಣಿಗೆಯಲ್ಲಿ
ಕೆಪಿಸಿಸಿ ಸದಸ್ಯರಾಗಿರುವ ನಿವೃತ್ತ ಎಸ್.ಪಿ ಪಿತಾಂಬರ ಹೇರಾಜೆ ರವರು ಜು.೩ ರಂದು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು ಎನ್ನುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಆಸಕ್ತ ಅರ್ಹ ಯುವಕರಿಗೆ ಆ ಸ್ಥಾನವನ್ನು ನೀಡಬೇಕಾಗಿ ರಾಜೀನಾಮೆ ಪತ್ರದಲ್ಲಿ ವಿನಂತಿಸಿರುವ ಅವರು, ನನಗೆ ಪಕ್ಷದಲ್ಲಿ ಯಾವುದೇ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಇರುವುದಿಲ್ಲ. ನಾನೊಬ್ಬ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಉಳಿಯಲು ಇಚ್ಛಿಸುತ್ತೇನೆ ಅವಶ್ಯಕತೆ ಇದ್ದರೆ ನನ್ನ ಸಲಹೆಗಳನ್ನು ಪಡೆಯಬಹುದು. ಇಷ್ಟು ದಿನ ಪಕ್ಷದಲ್ಲಿ ಸಹಕರಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ರವರಿಗೆ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
ಇತ್ತೀಚೆಗೆ ಶಾಸಕ ಹರೀಶ್ ಪೂಂಜ ಅವರ ಮೂರನೇ ವಷ೯ದ ಸಂಭ್ರಮದ ಹಿನ್ನೆಲೆಯಲ್ಲಿ ಪೀತಾಂಬರ ಹೇರಾಜೆ ಅವರು ಶುಭಾಶಯ ಕೋರಿ ಹಾಗೂ ಶಾಸಕರ ಮೂರು ವಷಾ೯ದ ಸಾಧನೆ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿರುವ ವಿಷಯದಲ್ಲಿ ಅವರಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡು ಅವರು ರಾಜೀನಾಮೆ ನೀಡಿರಬಹುದೇ ಎಂಬ ಕುರಿತು ಕಾಯ೯ಕತ೯ರ ನಡುವೆ ತೀವ್ರ ಚಚೆ೯ಗಳು ನಡೆಯುತ್ತಿದ್ದು, ಎಲ್ಲರ
ಕುತೂಹಲ ಕೆರಳಿಸಿದೆ.